ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಹಾಸನ: ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಭರ್ಜರಿ ಚರ್ಚೆಯಾಗುತ್ತಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಓ ಪ್ರಕರಣ ಎಸ್ಐಟಿಗೆ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.

ಇನ್ನು ಪೆನ್ ಡ್ರೈವ್ ವಿಷಯಕ್ಕೆ ಸಂಬಂಧಿಸಿದಂತೆ ಈಗ ಬಿಗ್ ಬೆಸ್ಟ್ ಹೊರಬಿದ್ದು, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವ ಸತ್ಯವನ್ನು ಬಾಯಿಬಿಟ್ಟಿದ್ದಾರೆ.

ಹೌದು, ಪ್ರಜ್ವಲ್ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಬಿಗ್ ಸಿಕ್ಕಂತಾಗಿದೆ. ​ಪೆನ್​ಡ್ರೈವ್ ಅನ್ನು ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೆಗೌಡಗೆ ಬಿಟ್ಟು ಬೇರೆ ಯಾರಿಗೂ ನೀಡಿಲ್ಲ ಎಂದು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹರಿದಾಡಿದ ಮಹಿಳೆಯರ ಅಶ್ಲೀಲ ವಿಡಿಯೋ ಉಳ್ಳ ಪೆನ್​ಡ್ರೈವ್​ ಅನ್ನು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್​ಗೆ ಕಾರ್ತಿಕ್ ನೀಡಿದ್ದ. ನಂತರ ನನಗೆ ನೀಡಿದ್ದ ಎಂದು ದೇವರಾಜೇಗೌಡ ಸೋಮವಾರ ತಿಳಿಸಿದ್ದರು. ಇದರ ಬೆನ್ನಲ್ಲೇ ಕಾರ್ತಿಕ್ ಆ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಾಜಿ ಚಾಲಕ ಕಾರ್ತಿಕ್ ಹೇಳಿದ್ದೇನು?

‘ನಾನು ರೇವಣ್ಣ ಹಾಗೂ ಪ್ರಜ್ವಲ್ ಜೊತೆ ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದೆ. ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಮಾಡಿದ ದೌರ್ಜನ್ಯ, ನಮ್ಮ ಜಮೀನು ಬರೆಸಿಕೊಂಡಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ. ನಾನು ಅವರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ಮಾಡುವ ತಯಾರಿಯಲ್ಲಿ ಇದ್ದೆ. ಆಗ ಅವರ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಬಗ್ಗೆ ವಿಚಾರ ಗೊತ್ತಾಗಿ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ. ಆಗ, ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಅವರು ಕೇಸ್ ತಗೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದೆ. ಆಗ ಮತ್ತೆ ನನ್ನನ್ನು ಕರೆಸಿ, ಕೋರ್ಟ್ ಹೋರಾಟ ಮಾಡಿದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದರು. ಎಲ್ಲಾ ಮಾದ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೇ ನನ್ನ ಜೊತೆ ನಿಂತು ಅವರೇ ಹೇಳಿಕೆ ಕೊಟ್ಟಿದ್ದರು’ ಎಂದು ಕಾರ್ತಿಕ್ ಹೇಳಿದ್ದಾರೆ.

ಇದೆಲ್ಲ ಆದ ಬಳಿಕ ಪ್ರಜ್ವಲ್ ರೇವಣ್ಣ ನನ್ನ ವಿರುದ್ಧ ಸ್ಟೇ ತಂದರು. ಯಾವುದೆ ವೀಡಿಯೋ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಆಗ ಆ ತಡೆಯಾಜ್ಞೆ ಪ್ರತಿಯನ್ನು ತೆಗೆದುಕೊಂಡು ನಾನು ದೇವರಾಜೇಗೌಡ ಬಳಿ ಹೋದೆ. ಆಗ ಅವರು, ‘ನಿನ್ನ ಬಳಿ ಏನೊ ವೀಡಿಯೋ, ಫೋಟೊ ಇದೆಯಂತೆ, ಹಾಗಾಗಿ ತಡೆಯಾಜ್ಞೆ’ ತಂದಿದಾರೆ ಎಂದರು.

Related