ಒಂದೆಲಗ ಸೊಪ್ಪಿನಲ್ಲಡಗಿದೆ ಔಷಧಿಯ ಶಕ್ತಿ

ಒಂದೆಲಗ ಸೊಪ್ಪಿನಲ್ಲಡಗಿದೆ ಔಷಧಿಯ ಶಕ್ತಿ

ಹಿಂದಿನ ಕಾಲಗಳಲ್ಲಿ ಆರೋಗ್ಯ ಸಮಸ್ಯೆ ಬಂದರೆ ಪ್ರಕೃತಿಯಲ್ಲಿ ಸಿಗುವಂತಹ ಸೊಪ್ಪು ಮತ್ತು ಇನ್ನಿತರ ಗಿಡಮೂಲಿಕೆಗಳನ್ನು ಬಳಸಿ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದರು.

ಅದರಂತೆ ಇಂದು ಸಹ ನಮ್ಮ ಆರೋಗ್ಯದಲ್ಲಿ ಕೆಲವು ಗಿಡಮೂಲಿಕೆಗಳನ್ನು ಉಪಯೋಗಿಸಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಹೌದು, ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಒಂದೆಲಗ ಔಷಧಿಯ ಗುಣವಿರುವ ಸಸ್ಯವಾಗಿದೆ. ನೆಲದಲ್ಲಿ ನೀರಿನಂಶ ಇರುವ ಪ್ರದೇಶದಲ್ಲಿ ಒಂದೆಲಗ ಹೆಚ್ಚಾಗಿ ಇರುತ್ತದೆ. ಕರಾವಳಿಯ ಭಾಗಕ್ಕೆ ಬಂದರೆ, ಅಡಿಕೆ ತೋಟಗಳಲ್ಲಿ, ಗದ್ದೆಗಳಲ್ಲಿ ಇವುಗಳು ಸಾಕಷ್ಟು ಪ್ರಮಾಣಗಳಲ್ಲಿ ದೊರೆಯುತ್ತವೆ.

ಕೆಮ್ಮು, ಉಸಿರಾಟದ ತೊಂದರೆ ಇರುವವರು ಒಂದೆಲವನ್ನು ಬಳಸುವುದು ಬಹಳ ಉತ್ತಮವಾಗಿದೆ. ಒಂದೆಲಗದ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸ ಬೇಕು. ಒಂದೆಲಗ ನಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದರ ಸೇವನೆಯಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ ಎಂದು ಜನರು ನಂಬುತ್ತಾರೆ.

ಪ್ರತಿನಿತ್ಯ ಬೆಳೆಯುವ ಮಕ್ಕಳಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಾಗಲು ಇದು ಸಹಕಾರಿಯಾಗಿದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುತ್ತದೆ.

ಮಲಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಬಹುದು. ಮಾತ್ರವಲ್ಲದೇ ಒಂದೆಲಗ ರೋಗ ನಿವಾರಕವು ಹೌದು. ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಮಧುಮೇಹಿಗಳಿಗೆ ದಿನನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು.

ಒಂದೆಲಗ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಎರಡು ಗಂಟೆಗಳ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ.

Related