ಸೌರಮಂಡಲ ವಿಸ್ಮಯ, ವಿಶ್ವ ಕಾತರ

ಸೌರಮಂಡಲ ವಿಸ್ಮಯ, ವಿಶ್ವ ಕಾತರ

ಬೆಂಗಳೂರು : ಇಂದು ಸೌರಮಂಡಲದಲ್ಲಿ ಮತ್ತೊಂದು ವಿಸ್ಮಯ ಸಂಭವಿಸಲಿದೆ. ಆಗಸದಲ್ಲಿ ಮತ್ತೊಂದು ಗ್ರಹಣ ಸಂಭವಿಸಲಿದ್ದು, 2020ರ ಸಾಲಿನ ಮೊದಲ ಸೂರ್ಯಗ್ರಹಣ ಇದಾಗಿದೆ. ಗ್ರಹಣ ಸಂದರ್ಭದಲ್ಲಿ ಸೂರ್ಯನು ಹೊಳೆಯುವ ಉಂಗುರದಂತೆ ಕಾಣುತ್ತಾನೆ.

ಆಫ್ರಿಕಾದ ಗಣರಾಜ್ಯ ಕಾಂಗೋ, ಇಥಿಯೋಪಿಯಾ, ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ವಿಶ್ವದ ಹಲವೆಡೆ ಸೂರ್ಯಗ್ರಹಣ ಗೋಚರವಾಗಲಿದೆ. ಜೂನ್ 21 (ನಾಳೆ) ಅಮಾವಾಸ್ಯೆ ದಿನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಸೂರ್ಯಗ್ರಹಣ ಗೋಚರಿಸಲಿದೆ.
ಗ್ರಹಣ ಕಾಲದಲ್ಲಿ ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಳೆಯ ಆಕೃತಿಯಲ್ಲಿ ಸೂರ್ಯ ಗೋಚರಿಸಲಿದ್ದಾನೆ. ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ 10.30ಕ್ಕೆ ಆರಂಭವಾಗುವ ಸೂರ್ಯಗ್ರಹಣ ಮಧ್ಯಾಹ್ನ 1.32ಕ್ಕೆ ಮೋಕ್ಷವಾಗುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ಸೂರ್ಯಗ್ರಹಣದ ಆರಂಭ ಮತ್ತು ಮೋಕ್ಷದ ಕಾಲದಲ್ಲಿ ವ್ಯತ್ಯಾಸ ಇರಲಿದೆ. ಈಗಾಗಲೇ ಎರಡು ಚಂದ್ರಗ್ರಹಣಗಳನ್ನು ಕಂಡಿರುವ ನಾವು ಮತ್ತೊಂದು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದೇವೆ.

ಸುಮಾರು 6 ಗಂಟೆಗಳ ಕಾಲ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ನೋಡುವ ಅವಕಾಶ ಭಾರತ ಸೇರಿದಂತೆ ಜಗತ್ತಿನ ಹಲವು ಪ್ರದೇಶಗಳ ಜನರಿಗೆ ಸಿಕ್ಕಿದೆ. ಖಗ್ರಾಸ ಸೂರ್ಯಗ್ರಹಣವಾಗಿರುವುದರಿಂದ ಬರಿಗಣ್ಣಿನಿಂದ ನೋಡಬಾರದು. ಸುರಕ್ಷಾ ಕನ್ನಡಕ ಧರಿಸಿ ಇದನ್ನು ನೋಡಬೇಕು. ಇದೇ ಸಾಲಿನಲ್ಲಿ ಅಂದರೆ ಡಿಸೆಂಬರ್ 14, 15ರಂದು ಮತ್ತೊಂದು ಸೂರ್ಯಗ್ರಹಣ ಸಂಭವಿಸಲಿದೆ.

ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದು, ಈ ಖಗೋಳ ವಿಸ್ಮಯ ಚಿಲಿ ಮತ್ತು ಅರ್ಜೆಂಟೈನಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ನಾಳೆ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದಲ್ಲಿ ಪ್ರಕೃತಿಯಲ್ಲಿ ಹಲವು ವ್ಯತ್ಯಯಗಳು ಸಂಭವಿಸುವ ಸಾಧ್ಯತೆಗಳಿವೆ.

Related