ನಿದ್ರೆಯ ಕೊರತೆಯಿಂದಾಗುವ ಅಡ್ಡ ಪರಿಣಾಮಗಳು

ನಿದ್ರೆಯ ಕೊರತೆಯಿಂದಾಗುವ ಅಡ್ಡ ಪರಿಣಾಮಗಳು

ಅತಿಯಾದ ನಿದ್ರೆಯ ಕೊರತೆಯು ದೇಹದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರ ಕಟ್ಟಿಟ್ಟ ಬುತ್ತಿ. ಈ ಕಾರಣದಿಂದಾಗಿ ಪ್ರತಿ ದಿನ ರಾತ್ರಿ 5-8 ಗಂಟೆಗಳ ನಿರಂತರ ನಿದ್ರೆಯನ್ನು ಮಾಡಬೇಕು ಎಂದು ಸಂಶೋದನೆಯಿಂದ ತಿಳಿದು ಬಂದಿದೆ.

ಇನ್ನು ಕಿಂಗ್ಸ್ ಕಾಲೇಜ್ ಲಂಡನ್ನ ಸಂಶೋಧಕರ ಈ ಸಂಶೋಧನೆಯ ಪ್ರಕಾರ, ನಿದ್ರೆಯ ಮಾದರಿಗಳಲ್ಲಿನ ಸಣ್ಣ ವೈಪರೀತ್ಯಗಳು ಸಹ ದೇಹದ ಸೂಕ್ಷ್ಮ ಕಣಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಲಂಡನ್ನ ಕಿಂಗ್ಸ್ ಕಾಲೇಜ್ನ ಸಂಶೋಧನೆಯ ಹಿರಿಯ ಲೇಖಕ ಡಾ. ವೆಂಡಿ ಹಾಲ್ ಪ್ರಕಾರ ನಿದ್ರಾ ಭಂಗ, ರಾತ್ರಿ ವೇಳೆಯಲ್ಲಿ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಸಂಯೋಜನೆಯು ಪಚನ ಕ್ರಿಯೆಯಿಂದ ಚಯಾಪಚಯ ಕ್ರಿಯೆಯವರೆಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇನ್ನು ಕಳಪೆ ಗುಣಮಟ್ಟ ಆಹಾರದ, ಸ್ಥೂಲಕಾಯತೆ ಮತ್ತು ಕಾರ್ಡಿಯೋಮೆಟಬಾಲಿಕ್ ಆರೋಗ್ಯವು ಹೃದಯಾಘಾತ,ಬಿ.ಪಿ ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಕೊರತೆಯಿಂದಾಗಿ, ಜೀರ್ಣಕಾರಿ ಆರೋಗ್ಯವು ಹದಗೆಡುತ್ತದೆ, ಇದು ಈ ರೋಗಗಳ ಬೆಳವಣಿಗೆ ಹಾಗೂ ಉತ್ಸಾಹಕ್ಕೆ ಕಾರಣವಾಗಬಹುದು ಎಂದು ಲಂಡನ್‌ ನ ಸಂಶೋದಕರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.

ವರದಿಗಾರ

ಎ.ಚಿದಾನಂದ

Related