ವಿರೋಧಿಗಳಿಗೆ ಶಿವಾನಂದ ಪಾಟೀಲ್ ಸವಾಲ್

  • In State
  • August 4, 2021
  • 536 Views
ವಿರೋಧಿಗಳಿಗೆ ಶಿವಾನಂದ ಪಾಟೀಲ್ ಸವಾಲ್

ಕೊಲ್ಹಾರ : ಕೃಷ್ಣಾ ನದಿಯಿಂದ ಬಸವನ ಬಾಗೇವಾಡಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ ಎಂದು ಯಾರಾದರು ಸಾಬೀತು ಪಡಿಸಿದರೆ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಶಾಸಕ ಶಿವಾನಂದ ಪಾಟೀಲ ಸವಾಲು ಹಾಕಿದ್ದರು.
ಮಸೂತಿ ಗ್ರಾಮದಲ್ಲಿ ಬುಧವಾರ ವಿವಿಧ ಇಲಾಖೆಗಳಿಂದ ನೂತನವಾಗಿ ನಿರ್ಮಾಣಗೊಂಡಿರುವ ಹಲವಾರು ಕಾಮಗಾರಿಗಳ ಭೂಮಿ ಪೂಜೆ ಹಾಗೂ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ನೇರವೆರಿಸಿ ಮಾತನಾಡಿದರು. ‘ಎನ್‌ಟಿಪಿಸಿ ಯೋಜನೆಯ ಲಾಭ ಈ ಭಾಗದ ರೈತರಿಗೆ, ನಿರೋದ್ಯೋಗಿ ಯುವಕರಿಗೆ ದೊರಕುವಂತಾಗಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ, ಒಂದು ವೇಳೆ ಸಾಧ್ಯವಾಗದಿದ್ದರೆ, ಮುಂದಿನ ಚುಣಾವಣೆಯಲ್ಲಿ ನಮ್ಮ ಪಾರ್ಟಿ ಅಧಿಕಾರಕ್ಕೆ ಬಂದರೆ, ಸ್ಥಳೀಯ ನಾಗರಿಕರಿಗೆ ಸಕಲರೀತಿಯಲ್ಲಿ ಅನೂಕುಲ ದೊರಕಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಎಲ್ಲಾ ಗ್ರಾಮ, ಪಟ್ಟಣ, ನಗರಗಳ ಅಭಿವೃದ್ದಿಗಾಗಿ ತಾರತಮ್ಯ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕೊಲ್ಹಾರ ಪಟ್ಟಣಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿಸಿದ್ದರೂ ನಾಗರಿಕರು, ಚುನಾಯಿತ ಪ್ರತಿನಿಧಿಗಳು ಕಾಮಗಾರಿಗಳನ್ನು ಪ್ರಾರಂಭೀಸಲು ಅನುವು ಮಾಡಿಕೊಡದೆ ಇರುವುದು ಅತ್ಯಂತ ವಿಷಾದನೀಯ’ ಎಂದರು. ಮಸೂತಿ ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪ ಕೇಂದ್ರ, ಗಿಡ್ಡೇಶ್ವರ ದೇವಸ್ಥಾನದ ಆವರಣದಲ್ಲಿ ಹರಾಜು ಕಟ್ಟೆ, ಬಯಲು ರಂಗಮಂದಿರ, ಪವಾಡ ಬಸವೇಶ್ವರ, ಆಸಂಗಿ ವಾಮನ ಮುತ್ಯಾರ ಮಠದಲ್ಲಿ ಸಮುದಾಯ ಭವನ, ಜಗದೀಶ್ವರ ಹಿರೇಮಠದಲ್ಲಿ ಅಡುಗೆ ಕೋಣೆ, ಶೌಚಾಲಯ, ಸ್ನಾನ ಗ್ರಹ, ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೋಣೆಗಳು, ವಿರಭದ್ರೇಶ್ವರ ದೇವಸ್ಥಾನ, ಬಸ್‌ನಿಲ್ದಾಣ ಹತ್ತೀರ ಹೈಮಾಸಕ್ ದೀಪಗಳ ಉದ್ಘಾಟಿಸಿದರು.
ಯರನಾಳ ವಿರಕ್ತ ಮಠದ ಸಂಗನಬಸವ ಶಿವಯೋಗಿಗಳ ಸಾನಿದ್ಯ, ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಗಣಾಚಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ತಾನಾಜಿ ನಾಗರಾಳ, ಶೇಖರ ಗೊಳಸಂಗಿ, ಕಲ್ಲಪ್ಪ ಇಂಡಿ, ಕೆ.ವಿ. ಕುಲಕರ್ಣಿ, ರಫೀಕ ಪಕಾಲಿ, ಜಿಪಂ ಮುಖ್ಯಾಧಿಕಾರಿ ಗೋವಿಂದ ರೆಡ್ಡಿ, ಸಿ.ಪಿ. ಪಾಟೀಲ್, ಎನ್‌ಟಿಪಿಸಿ ಅಧಿಕಾರಿಗಳಾದ ಕೆ.ಜಿ. ರೆಡ್ಡಿ, ಜಯನಾರಾಯಣ, ತಹಶೀಲ್ದಾರ ಎಸ್.ಡಿ. ಮುರಾಳ, ಎಪ್.ಬಿ. ಪಠಾಣ, ಕ್ಷೇತ್ರ ಶೀಕ್ಷಣಾಧಿಕಾರಿ ಬಸವರಾಜ ತಳವಾರ ಹಲವಾರು ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

Related