‘ಶಿವ​ ಭೋಜನ​’ ಯೋಜನೆ

‘ಶಿವ​ ಭೋಜನ​’ ಯೋಜನೆ

ಮುಂಬೈ, ಫೆ.14 : ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ನೀಡುವುದು ಶಿವ​ ಭೋಜನ​’ ಯೋಜನೆಯ ಮುಖ್ಯ ಉದ್ದೇಶ. ಯೋಜನೆಗೆ ಮೊದಲ ದಿನವೇ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ನಿತ್ಯ ಇಲ್ಲಿಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್​ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಸರ್ಕಾರ ಜಾರಿಗೆ ಬಂದ ನಂತರ ‘ಇಂದಿರಾ ಕ್ಯಾಂಟೀನ್​’ ಮಾದರಿಯಲ್ಲೇ ‘ಶಿವ​ ಭೋಜನ​’ ಯೋಜನೆಯನ್ನು ಪರಿಚಯಿಸಿತ್ತು. 10 ರೂ. ಊಟಕ್ಕೆ ಜನ ಸಾಮಾನ್ಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಗಣರಾಜ್ಯೋತ್ಸವದ ನಿಮಿತ್ತ ಜ.26ರಂದು ಮಹಾರಾಷ್ಟ್ರ ಸರ್ಕಾರ ‘ಶಿವ​ ಭೋಜನ​’ ಪರಿಚಯಿಸಿತ್ತು. ಕಳೆದ 17 ದಿನಗಳಲ್ಲಿ ಒಟ್ಟು 2.33 ಲಕ್ಷ  ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ. ಅಂದರೆ ನಿತ್ಯ ಸುಮಾರು 13,750 ಜನರು ‘ಶಿವ್ ಭೋಜನ​’ದ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಾರೆ.

 

 

Related