“ವಿಮೋಚನೆಯ ರಹಸ್ಯ” ಪುಸ್ತಕ ಲೋಕಾರ್ಪಣೆ

“ವಿಮೋಚನೆಯ ರಹಸ್ಯ”  ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಮನುಜ್ಯೋತಿ ಆಶ್ರಮದ ವತಿಯಿಂದ‌ “ವಿಮೋಚನೆಯ ರಹಸ್ಯ” ಎಂಬ ಪುಸ್ತಕ ಕನ್ನಡದಲ್ಲಿ ಅನುವಾದನೆಯಾಗಿ ನಗರದ ಹಲಸೂರಿನ ಜಿಮ್ ಖಾನ್ ಕ್ಲಬ್ ನಲ್ಲಿ ಲೋಕಾರ್ಪಣೆಯಾಯಿತು.

ಮನುಜ್ಯೋತಿ ಆಶ್ರಮದ ದೇವಾಸೀರ್ ಲಾರಿ ಎಂಬುವವರು “ವಿಮೋಚನೆಯ ರಹಸ್ಯ” ಎಂಬ ಪುಸ್ತಕವನ್ನು ಬರೆದಿದ್ದು, ಈ ಪುಸ್ತಕದಲ್ಲಿ ದೆವರು ಒಬ್ಬನೇ ಎಂಬದು ಕಂಡುಬರುತ್ತದೆ. ಅದಲ್ಲದೆ, ಮನುಷ್ಯನು ಜೇವನದ ಅನೇಕ ಗೊಂದಲಗಳಿಂದ ಹೇಗೆ ಹೊರ ಬರಬೇಕಾದರೆ ಹೇಗೆ ಎಂಬ ಬಗ್ಗೆ ಈ ಪುಸ್ತಕದ ಸಾರಾಂಶದಲ್ಲಿದೆ. , ಮನು ಕುಲದಲ್ಲಿರುವ ಎಲ್ಲ ದೇವರು, ಧರ್ಮ ಒಂದೇ ಆಗಿದೆ ಎಂಬ ಸಂದೇಶಗಳನ್ನು ಸಾರುವ ಮೂಲ ಉದ್ದೇಶವನ್ನು ಈ ಆಶ್ರಮ ಹೊಂದಿದೆ. ಇಂಗ್ಲಿಷ್‌ ಮತ್ತು ತೆಲುಗುವಿನಲ್ಲಿರುವ ಈ ಪುಸ್ತಕವು ಕನ್ನಡದಲ್ಲಿ ಅನುವಾದನೆ ಮಾಡಿ ಆಶ್ರಮದ ಧ್ಯೇಯವಾಕ್ಯವನ್ನು ಪ್ರಪಂಚಾದ್ಯಂದತ್ತ ಸಾರಲು ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.

ಕೆ.ಎ.ಎಸ್ ಅಧಿಕಾರಿಯಾದ ಸಂಗಮೇಶ್ ಉಪಾಸೆ ಮಾತನಾಡಿ, ಸಂಸ್ಥೆಯ ನಿರ್ಮಾಪಕರಾದ ಲಹರಿ ಕೃಷ್ಣರ ಚಿಂತವನ್ನು ಹಾಡಿ ಹೊಗಳಿದರು.

ಪುಸ್ತಕ ಬಿಡುಗಡ ಸಮಾರಂಭಲ್ಲಿ ಆಯುರ್ ಆಶ್ರಮದ ಡಾ.ಸಂತೋಷ್ ಗುರೂಜಿ, ಆಶ್ರಮದ ಮುಖ್ಯಸ್ಥರಾದ ಲಿಯೋ ಸಿ ಲಾರಿ,ಆಶ್ರಮದ ನಿರ್ಮಾಪಕರಾದ ಲಹರಿ ಕೃಷ್ಣ, ಕೆ.ಆರ್‌. ಪುರಂ ಶಾಸಕರಾದ ಬೈರತಿ ಬಸವರಾಜ್, ಶ್ರೀದೇವಿ ಮೆಡಿಕಲ್ ಕಾಲೇಜಿನ ಭೀಮರಾಜ್, ಕೆಎಎಸ್ ಅಧಿಕಾರಿ ಸಂಗಮೇಶ್ ಉಪಾಸೆ ಮತ್ತಿತರರು ಉಪಸ್ಥಿತರಿದ್ದರು.

Related