ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಎಸ್ ಬಿ ಐ ಬ್ಯಾಂಕ್

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಎಸ್ ಬಿ ಐ ಬ್ಯಾಂಕ್

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆಂದು ಹೊಸ ಸುದ್ದಿಯನ್ನು ನೀಡಿದೆ.

ಹೌದು ಎಸ್ ಬಿ ಐ ಗ್ರಾಹಕರಿಗೆ ಇಂದಿನಿಂದ ಡಿಸೆಂಬರ್ 27ರಿಂದ fd ಫಿಕ್ಸ್ ಡೆಪಾಸಿಟ್ ಮಾಡಿರುವಂತಹ ಗ್ರಾಹಕರಿಗೆ ಬಡ್ಡಿ ದರವನ್ನು ಹೆಚ್ಚಿಗೆ ಮಾಡಿದೆ ಎಂದು ತಿಳಿದುಬಂದಿದೆ.

ಒಂದರಿಂದ ಮೂರು ವರ್ಷ, ಹಾಗೂ ಐದರಿಂದ ಹತ್ತು ವರ್ಷದ ಅವಧಿಯವರೆಗಿನ ಠೇವಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಎಫ್​ಡಿಗಳಿಗೂ ಎಸ್​ಬಿಐ ಬಡ್ಡಿ ದರ ಹೆಚ್ಚಿಸಿದೆ. ಹೊಸ ದರಗಳು ಇವತ್ತಿನಿಂದಲೇ (ಡಿ. 27) ಜಾರಿಗೆ ಬರುತ್ತವೆ.

ದರ ಪರಿಷ್ಕರಣೆ ಬಳಿಕ ಎಸ್​ಬಿಐನಲ್ಲಿ ಠೇವಣಿಗಳಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 4ರಿಂದ ಶೇ. 7.50ಯವರೆಗೂ ಬಡ್ಡಿದರ ಇದೆ. ಆದರೆ, ಎಸ್​ಬಿಐ ವಿಶೇಷ ಠೇವಣಿ ಸ್ಕೀಮ್ ಆದ 400 ದಿನಗಳ ಅಮೃತ್ ಕಳಶ್ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ಶೇ. 7.10ರಷ್ಟು ಬಡ್ಡಿ, ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ಪಡೆಯಬಹುದಾಗಿದೆ.

ಕನಿಷ್ಠ ಡೆಪಾಸಿಟ್ ಅವಧಿಯಾದ ಏಳು ದಿನದಿಂದ 45 ದಿನದವರೆಗಿನ ಠೇವಣಿಗಳಿಗೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಲಾಗಿದೆ. 46ದಿದ 179 ದಿನದವರೆಗಿನ ಠೇವಣಿಗೆ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 180 ದಿನದಂದ 210 ದಿನದವರೆಗಿನ ಅವಧಿಯ ಠೇವಣಿಗಳಿಗೂ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ.

 

 

Related