ಉಪಗ್ರಹ ಆಧಾರಿತ ಆರೋಗ್ಯ ತರಬೇತಿ

  • In State
  • February 28, 2020
  • 353 Views
ಉಪಗ್ರಹ ಆಧಾರಿತ ಆರೋಗ್ಯ ತರಬೇತಿ

ಕೆ.ಆರ್.ಪುರ, ಫೆ. 28: ತಾಯಿ ಹಾಗೂ ಶಿಶು ಮರಣ ತಡೆಗಟ್ಟುವ ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ಅನುಸರಿಸುವ ಕ್ರಮ ಹಾಗೂ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯ ಗಳನ್ನು ತರಬೇತಿ ನೀಡಲಾಗುವುದೆಂದು ಬೆಂಗಳೂರು ಪೂರ್ವ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕು  ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಗ್ರಹ ಮೂಲಕ ನೀಡುತ್ತಿರುವ ತರಬೇತಿ ಕಾರ್ಯಕ್ರಮವನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಅವರೊಂದಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ನೂತನ ಕಾರ್ಯಗಳನ್ನು ಉಪಗ್ರಹ ಮೂಲಕ ಪ್ರಚಾರ ಮಾಡಲಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಪಡೆದು ಸಾರ್ವಜನಿಕರಿಗೆ ತಿಳಿಸಬೇಕೆಂದು ಹೇಳಿದರು.

ಹೆಚ್ ಎಂ ಐ ಸಿ, ಆರ್ ಸಿ ಹೆಚ್ ಪೊರ್ಟನ್, ಆಶಾ ನಿಧಿ ಬಗ್ಗೆ ತರಬೇತಿ, ನರ್ಸ್, ಆಶಾ ಕಾರ್ಯಕರ್ತೆ, ತಾಯಿ ಕಾರ್ಡ್, ರಕ್ತ ಹೀನತೆ, ತಾಯಿ ಮಕ್ಕಳ ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.

ಫೆಬ್ರವರಿ 26 ರಿಂದ ಮಾರ್ಚ್ 9  ವರೆಗೆ ಉಪಗ್ರಹ ಮೂಲಕ ತರಹದ ನೀಡಲಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆರೋಗ್ಯ ಶಿಕ್ಷಣ ಅಧಿಕಾರಿ ವಿಂದ್ಯ, ಹಿರಿಯ ಪುರುಷ ಆರೋಗ್ಯ ಸಹಾಯಕ ಪರಮೇಶ್ವರ್, ತಾಲೂಕಿನ ವೈದ್ಯಾಧಿಕಾರಿಗಳು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related