ಬಿಟಿಎಂ ಕ್ಷೇತ್ರದಲ್ಲಿ ಸಂಕ್ರಾಂತಿ ಸಂಭ್ರಮ

ಬಿಟಿಎಂ ಕ್ಷೇತ್ರದಲ್ಲಿ ಸಂಕ್ರಾಂತಿ ಸಂಭ್ರಮ

ಬೆಂಗಳೂರು (ಬಿಟಿಎಂ ಲೇಔಟ್): ಇಂದು ರಾಜ್ಯದಾದ್ಯಂತ ಸಂಕ್ರಾಂತಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ರೈತರು ಭೂತಾಯಿ ನಮ್ಮ ಕೈ ಹಿಡಿದು ಕಾಪಾಡಲೆಂದು ಭೂತಾಯಿಗೆ ಪೂಜೆ ಸಲ್ಲಿಸುತ್ತಾ ನಮ್ಮನ್ನು ಕೈಹಿಡಿದು ಕಾಪಾಡು ಎಂದು ರೈತರು ಭೂಮಿತಾಯಿಗೆ ಪೂಜೆ ಮಾಡಿ ನಮಸ್ಕರಿಸುತ್ತಾರೆ.

ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಹಳ್ಳಿ ಸೊಬಗಿನಲ್ಲಿ ಸಂಕ್ರಾಂತಿ ಹಬ್ಬವನ್ನು ಸಾವಿರಾರು ಜನ ಸೇರಿಕೊಂಡು ಅತಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಹೇಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ ಅದೇ ರೀತಿ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಕಾಂಗ್ರೆಸ್ನ ಮುಖಂಡರು ಕಾರ್ಯಕರ್ತರು ಸೇರಿಕೊಂಡು ಇಂದು ಬಹಳ ಸಡಗರದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿರುವ ಜನತೆಗೆ ಹಳ್ಳಿ ಸೊಬಗಿನ ಬಗ್ಗೆ ಗೊತ್ತಿರುವುದಿಲ್ಲ ಹಾಗಾಗಿ ಹಳ್ಳಿ ಸೊಬಗನ್ನು ನಗರದಲ್ಲಿ ಆಚರಣೆ ಮಾಡಲಾಗುತ್ತಿದ್ದು ಇದರಿಂದ ನಗರ, ಪಟ್ಟಣದಲ್ಲಿ ವಾಸವಾಗುವ ಜನತೆಗೂ ಕೂಡ ಮನರಂಜನೆ ಸಿಗುವುದರಿಂದ ಸಂತೋಷ ಕೂಡ ಒದಗುತ್ತದೆ ಎಂದು ಹೇಳಿದರು.

ಹಳ್ಳಿ ಸೊಗಗಿನಲ್ಲಿ ಹೇಗೆ ಸಂಕ್ರಾಂತಿ ಹಬ್ಬದಲ್ಲಿ ಎತ್ತಿನ ಬಂಡಿ, ರಂಗೋಲಿ ಹಾಕುವುದು ಪೊಂಗಲ್ ಮಾಡುವುದು ಇದೆಲ್ಲ ಕಾರ್ಯಕ್ರಮವನ್ನು ನಮ್ಮ ಕಾಂಗ್ರೆಸ್ನ ಅಧ್ಯಕ್ಷರುಗಳು ಮಾಡಿರುವುದರಿಂದ ನಮ್ಮ ಭಾಗದಲ್ಲಿರುವ ಜನರಿಗೆ ಇದರಿಂದ ಹಳ್ಳಿ ಹಬ್ಬವನ್ನು ಮರೆಯುವುದಿಲ್ಲವೆಂದು ಹೇಳಿದರು.

ಇನ್ನು ಅಲ್ಲಿ ನೇರದಿರುವಂತಹ ಜನರಿಗೆ ಎಳ್ಳು ಬೆಲ್ಲವನ್ನು ನೀಡುತ್ತಾ ಎಲ್ಲಾ ಜನರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳಿದರು. ಈ ವರ್ಷ ಆ ದೇವರು ಸುಖ ಸಮೃದ್ಧಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸುತ್ಗುಂಟ ಪಾಳ್ಯದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಮಂಜುನಾಥ್, ಆಡುಗೋಡೆಯಲ್ಲಿ ಮಾಜಿ ಪಾಲಿಕೆಯ ಸದಸ್ಯರಾದ ಬಿ ಮೋಹನ್, ಕೋರಮಂಗಲದಲ್ಲಿ ಬ್ಲಾಕ್ ಕಾಂಗ್ರೆಸ್ ಮೋರ್ಚಾ ಅಧ್ಯಕ್ಷರಾದ ಕಾಂಗ್ರೆಸ್ ಮುಖಂಡ ಆರ್ ವೆಂಕಟೇಶ್, ವೆಂಕಟಾಪುರದಲ್ಲಿ ದೇವರಾಜ್ ಮತ್ತು ಗಣೇಶ್, ಈಜಿಪುರದಲ್ಲಿ ಶ್ರೀರಾಮುಲು ಮತ್ತಿತರರು ಕಾಂಗ್ರೆಸ್ ಮುಖಂಡರು, ಜಕ್ಕಸಂದ್ರ ಹಾಗೂ ಮಡಿವಾಳದಲ್ಲಿ ಮಾಜಿ ಮಹಾಪೌರರಾದ ಮಂಜುನಾಥ್ ರೆಡ್ಡಿ,  ಇನ್ನು ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಸಂಕ್ರಾಂತಿ ಹಬ್ಬದಲಿ ಸಂಭ್ರಮಿಸಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರದ ಎಂಟು ಭಾಗಗಳಲ್ಲಿ ಸುಮಾರು 20 ಜಾಗಗಳಲ್ಲಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸಲಾಗಿತ್ತು.

Related