ರನೌಟ್ ಮಾಡಿದ ರಾಹುಲ್ ಸಖತ್ ವೈರಲ್

ರನೌಟ್ ಮಾಡಿದ ರಾಹುಲ್ ಸಖತ್ ವೈರಲ್

ಮೌಂಟ್ ಮಾಂಗನುಯಿ. ಫೆ. 2 : ಕನ್ನಡಿಗ ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ಪಂದ್ಯದ ವಿರುದ್ಧದ ಕೊನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಷ್ಟೇ ಅಲ್ಲದೆ ಮಿಂಚಿನ ವೇಗದಲ್ಲಿ ಟಾಮ್ ಬೂಸ್ ಅವರನ್ನು ರನೌಟ್ ಮಾಡಿದ್ದಾರೆ.
ಕೆ.ಎಲ್.ರಾಹುಲ್ ಟಾಮ್ ಬೂಸ್ ಅವರನ್ನು ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್ ಇನ್ನಿಂಗ್ಸ್ ನ 3ನೇ ಓವರ್ ಮುಕ್ತಾಯಕ್ಕೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕಾಲಿನ್ ಮನ್ರೊ ವಿಕೆಟ್ ಬಳಿಕ ಮೈದಾಕ್ಕಿಳಿದ ಟಾಮ್ ಬೂಸ್ ಅವರು ವಾಷಿಂಗ್ಟನ್ ಸುಂದರ್ ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಬಳಿಕ ನವದೀಪ್ ಸೈನಿ ಎಸೆದ ಇನ್ನಿಂಗ್ಸ್ ನ ನಾಲ್ಕನೇ ಓವರಿನ ಎರಡನೇ ಎಸೆತದಲ್ಲಿ ಟಿಮ್ ಸೀಫರ್ಟ್ ನೇರವಾಗಿ ಸಂಜು ಸ್ಯಾಮ್ಸನ್ ಕಡೆಗೆ ತಳ್ಳಿ ಒಂಟಿ ರನ್ ಕದಿಯಲು ಯತ್ನಿಸಿದರು. ಬಾಲ್ ಕೈಗೆ ಸಿಗುತ್ತಿದ್ದಂತೆ ಬೌಲರ್ ಸೈನಿ ಕೈಗೆ ಬಾಲ್ ಕಡೆಗೆ ಎಸೆಯದೇ ಕೀಪರ್ ಮುಂದಿನ ವಿಕೆಟ್ ಕಡೆಗೆ ಎಸೆದರು. ಈ ವೇಳೆ ದೂರದಿಂದ ವೇಗವಾಗಿ ಓಡಿ ಬಂದ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಬಾಲ್ ಹಿಡಿದು ಟಾಮ್ ಬೂಸ್ ಅವರನ್ನು ರನೌಟ್ ಮಾಡಿದರು. ನ್ಯೂಜಿಲೆಂಡ್ ಮೂರನೇ ವಿಕೆಟ್ಗೆ ಕೇವಲ 17 ರನ್ ಗಳಿಸಿತ್ತು. ಸಂಕಷಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ರಾಸ್ ಟೇಲರ್ ಉತ್ತಮ ಜೊತೆಯಾಟ ನೀಡಿದರು. ನಾಲ್ಕನೇ ವಿಕೆಟ್ಗೆ ಈ ಜೋಡಿಯು 99 ರನ್ಗಳ ಜೊತೆಯಾಟದ ಕೊಡುಗೆ ನೀಡಿತು. ಈ ಜೋಡಿಯು ಶಿವಂ ದುಬೆ ಎಸೆದ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಸೇರಿ ಒಟ್ಟು 34 ರನ್ ಸಿಡಿಸಿತು. ಇದನ್ನೂ ಓದಿ: 10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Related