ಪರಿಹಾರ ತಾರತಮ್ಯ : ಕೈ ತರಾಟೆ

ಪರಿಹಾರ ತಾರತಮ್ಯ : ಕೈ ತರಾಟೆ

ಬೆಂಗಳೂರು, ಜು 11 : ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷಾಧಾರೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ರಾಜ್ಯ ಸರ್ಕಾರ 10 ಸಾವಿರ ರೂ. ಪರಿಹಾರ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಳೆ ಅಬ್ಬರದಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶೇ. ೪೦ರಷ್ಟು ಕಮೀಷನ್ ಪಡೆಯುವ ಬಿಜೆಪಿ ಸರ್ಕಾರ, ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿದೆ ಎಂದು ಪ್ರಶ್ನಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೈಗೊಂಡಿರುವ ಕ್ರಮಗಳು ಏನು ಆಶ್ರಯ ಕೇಂದ್ರಗಳನ್ನು ತೆರೆದಿರುವುದು ಏಕೆ? ಮನೆ ಹಾನಿಗೆ ಕೇವಲ ೧೦ ಸಾವಿರ ಪರಿಹಾರ ಸಾಕೇ? ಪ್ರಾಣ ಕಳೆದುಕೊಂಡ ಜನ ಜಾನುವಾರುಗಳಿಗೆ ನೀಡಿದ ಪರಿಹಾರವೇನು ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಇದುವರೆಗೂ ಸರ್ಕಾರ ಸಂಪರ್ಕ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. 2019 ರಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ವೇಳೆ ರಾಜ್ಯದಲ್ಲಿ ಸಂಪುಟ ಇರಲಿಲ್ಲ. 2020 ರ ವೇಳೆ ನಾಯಕತ್ವ ಬದಲಾವಣೆಯ ತಿಕ್ಕಾಟವಿತ್ತು. ೨೦೨೧ರಲ್ಲೂ ಸೂಕ್ತ ಪರಿಹಾರ ನೀಡಲಿಲ್ಲ. ಈಗ ಮತ್ತೆ ರಾಜ್ಯದಲ್ಲಿ ವ್ಯಾಪಕ ಮಳೆ ಹಾನಿಯಾಗಿ ಅಪಾರ ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿಗಳು ಆನ್‌ಲೈನ್ ಮೀಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. ಜನರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ದೂರಿದೆ.

Related