ಮಳೆಯಿಂದ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ : ರೈತರು

ಮಳೆಯಿಂದ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ : ರೈತರು

ಯಡ್ರಾಮಿ: ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಮಳೆಗೆ ಬೆಳೆಗಳು ನಾಶವಾಗಿವೆ. ತೊಗರಿ, ಹತ್ತಿ, ಎಲೆ, ಫಲ ಹೂವು ಹುದರಿ ನಾಶವಾಗಿದೆ. ರೈತರು ಇಷ್ಟು ದಿನಗಳ ಬೀಜ ಗೊಬ್ಬರ ಹಾಕಿ ಬೆಳಿಸಿದ ಬೆಳೆ ನಾಶವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸೀಲುಕಿದಾರೆ. ಸರ್ಕಾರ ಗಮನ ಹರಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಅತಿಯಾದರೆ ಅಮೃತ ಕೂಡ ವಿಷ ಎನ್ನುವಂತೆ ಬೆಳೆಗೆ ನೀರು ಹೆಚ್ಚಾಗಿ ಬೆಳೆ ಹಾಲಾಗಿವೆ ಹಳ್ಳದ ದಡದಲ್ಲಿ ಇರುವ ಹೊಲಗಳಂತು ಅರ್ಧದಷ್ಟು ಬೆಳೆ ಹಾನಿಯಾಗಿವೆ. ಹಳ್ಳ ಮತ್ತು ನಾಲೆ ನೀರು ಹೊಲಗಳಿಗೆ ನುಗ್ಗಿ ಬೆಳೆಗಳು ನೀರಿಗೆ ಕೊಚ್ಚಿಕೊಂಡು ಹೊಗಿವೆ. ಸರ್ಕಾರ ಇದರ ಬಗ್ಗೆ ಕಾಳಜಿವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Related