ಶಾಸಕನ ವಿರುದ್ಧ ರೇಪ್ ಕೇಸ್

ಶಾಸಕನ ವಿರುದ್ಧ ರೇಪ್ ಕೇಸ್

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲು ಮಾಡಿದ್ದಾರೆ.
ಶಾಸಕ ಮಹೇಶ್ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ.

ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್‌ಎ ಪರೀಕ್ಷೆಗೂ ತಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೇಗಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಶಾಸಕ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಾತ್ರವಲ್ಲದೇ ವಿಷಯವನ್ನು ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಅತ್ಯಾಚಾರದಿಂದಾಗಿಯೇ ನನಗೆ ಮಗಳ ಜನಿಸಿದ್ದಾಳೆ.
ನೆಹರೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್ ವರಿಷ್ಠಾಧಿಕಾರಿ ಶ್ವೇತ ಚೌಬೆ ತಿಳಿಸಿದ್ದಾರೆ.

Related