ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ರಮ್ಯಾ ಲೀಗಲ್​ ನೋಟೀಸ್​

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ರಮ್ಯಾ ಲೀಗಲ್​ ನೋಟೀಸ್​

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಬರ ಚಿತ್ರಗಳು ಮೂಡಿ ಬರುತ್ತಿದೆ. ಹೊಸಬರ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಚಿತ್ರವು ಕಳೆದ ಕೆಲವು ದಿನಗಳ ಹಿಂದೆ ಇದರ ಟ್ರೈಲರ್ ಬಿಡುಗಡೆಯಾಗಿತ್ತು. ಟೈಲರ್ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ಇದೇ ತಿಂಗಳು ಜುಲೈ 21ಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತೆರೆ ಮೇಲೆ ಅಪ್ಪಳಿಸಲಿದ್ದು ಈ ಚಿತ್ರಕ್ಕೆ ಈಗ ಒಂದು ಸಂಕಷ್ಟ ಎದುರಾಗಿದೆ.

ಹೌದು, ನಟಿ ರಮ್ಯಾ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡಕ್ಕೆ ಲೀಗಲ್​ ನೋಟೀಸ್​ ಕಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದ ಟ್ರೇಲರ್​ನಲ್ಲಿ ರಮ್ಯಾ ಅವರನ್ನು ನೋಡಿ ಫ್ಯಾನ್ಸ್​ ಖುಷಿ ಆಗಿದ್ದರು. ಆದರೆ ಈ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಈಗ ರಮ್ಯಾ ಅವರು ತಕರಾರು ತೆಗೆದಿದ್ದಾರೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೋ, ಸುದ್ದಿ ಮತ್ತಿತ್ತರ ಕಂಟೆಂಟ್​ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್​ ಮಾಡಿದ್ದಾರೆ. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟೀಸ್​ನಲ್ಲಿ ಒತ್ತಾಯಿಸಿದ್ದಾರೆ. ಇದು ಈಗ ಚಿತ್ರತಂಡಕ್ಕೆ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜುಲೈ 21ರಂದು ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಈಗ ಕೊನೇ ಕ್ಷಣದಲ್ಲಿ ರಮ್ಯಾ ಅವರಿಂದ ಲೀಗಲ್​ ನೋಟೀಸ್​ ಬಂದಿರುವುದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

 

Related