ರಾಮಲಿಂಗ ರೆಡ್ಡಿಯವರೇ ಸೋಲುವ ಭಯ ಹುಟ್ಟಿತ್ತೆ: ತೇಜಸ್ವಿ ಸೂರ್ಯ

ರಾಮಲಿಂಗ ರೆಡ್ಡಿಯವರೇ ಸೋಲುವ ಭಯ ಹುಟ್ಟಿತ್ತೆ: ತೇಜಸ್ವಿ ಸೂರ್ಯ

ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ ರೆಡ್ಡಿ ಪರವಾಗಿ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪವಾಗಿದ್ದು, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಬಿಟಿಎಂಲೇಔಟ್ ನ ಒಂದನೇ ಹಂತದಲ್ಲಿ ನಡೆದ ಘಟನೆಯಾಗಿದ್ದು ಶ್ರೀಧರ್ ರೆಡ್ಡಿ ಪರ ಕ್ಯಾನ್ವಾಸ್ ಮಾಡುತಿದ್ದ ಕಾರ್ಯಕರ್ತರು, ಈ ವೇಳೆ ಎದುರಾದ ಕಾಂಗ್ರೆಸ್ ನವರ ಜೊತೆ ಮಾತಿನ ಚಕಮಕಿ ನಡೆದಿದ್ದು ಕಾಂಗ್ರೇಸ್ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ.

ಇನ್ನು ಈ ಘಟನೆಯಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ಅಧ್ಯಕ್ಷರಾದಂತಹ ಹರಿನಾಥ್ ರವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಕುರಿತು ಈಗಾಗಲೇ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಇದಕ್ಕೆ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಜರಗಿಸಬೇಕೆಂದು ಒತ್ತಾಯಿತಿ ಬಿಟಿಎಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಧರ್‌ ರೆಡ್ಡಿ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ರಾಮಲಿಂಗ ರೆಡ್ಡಿ ಅವರೇ ಸೋಲುವ ಭಯದಲ್ಲಿ ಗೂಂಡಾಗಿರಿ ಶುರು ಮಾಡ್ಕೊಂಡಿದ್ದೀರಾ… ರೌಡಿಗಳನ್ನು ಕಳುಹಿಸಿ ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಪ್ರಯತ್ನ ಮಾಡಿಸಿದ್ದೀರಿ. ಒಬ್ಬ ಜನ ಪ್ರತಿನಿಧಿಯಾಗಿ ನೀವೇ ಗೂಂಡಾಗಿರಿ ಮಾಡಿಸಿದರೆ ಇನ್ನೂ ಕ್ಷೇತ್ರದ ಜನರ ರಕ್ಷಣೆ ಏನು? ಎಂದು ರಾಮಲಿಂಗ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ

ಬಿಟಿಎಂ ಕ್ಷೇತ್ರದ ಜನ ನಿಮ್ಮ ಈ ಗುಂಡಾಗಿರಿಗೆ ಮೇ 10ನೇ ತಾರೀಕುನಂದು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀಧರ ರೆಡ್ಡಿ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೇ ಮಾಡಿದವರ ಮೇಲೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದರ್ಜಿಸಲಾಯಿತು.

ಇನ್ನು ಪ್ರತಿಭಟನೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಧರೆಡ್ಡಿ ಅವರ ಜೊತೆ ಅಣ್ಣಾಮಲೈ, ಬಿಜೆಪಿ ಮುಖಂಡರಾದ ರಾಜೇಂದ್ರ ರೆಡ್ಡಿ, ಸುದರ್ಶನ್, ಮಾಜಿ ಪಾಲಿಕೆ ಸದಸ್ಯರಾದ ದೇವದಾಸ್ ಮುತ್ತಪ್ಪ, ಅನಿಲ್ ಶೆಟ್ಟಿ, ಸೇರಿದಂತೆ ಇನ್ನೂ ಹಲವಾರು ಬಿಜೆಪಿ ಮುಖಂಡರು ಆರೋಪಿಗಳನ್ನು ಬಂಧಿಸಬೇಕೆಂದು ಮಡಿವಾಳ ಪೊಲೀಸ್ ಠಾಣೆಯ ಮುಂದೆ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

Related