ಹಳೆಯ ನೆನಪು ಮೆಲುಕು ಹಾಕಿದ ರಜನಿಕಾಂತ್

ಹಳೆಯ ನೆನಪು ಮೆಲುಕು ಹಾಕಿದ ರಜನಿಕಾಂತ್

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ನಟನೆಯ ಸಿನಿಮಾ ಎಂದರೆ ಸಾಕು, ದೇಶದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಾರೆ.

ಹೌದು ಸದ್ಯ ರಜನಿಕಾಂತ್ ಅವರ ಜೈಲರ್ ಚಿತ್ರ ಈಗಾಗಲೇ ಅದ್ದೂರಿಯಾಗಿ ಬಿಡುಗಡೆಗೊಂಡಿದ್ದು ಇದು ಪ್ರೇಕ್ಷಕರ ಮನೆಗೆದ್ದಿದೆ. ಇನ್ನು ರಜನಿಕಾಂತ್ ಅವರು ಬೆಂಗಳೂರಿನ ಜಯನಗರ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ಬೆಂಗಳೂರಿನ ಜಯನಗರದ ಬಿಎಂಟಿಸಿ ಡಿಪೋಗೆ ಬೆಳಗ್ಗೆ 11:30ಕ್ಕೆ ರಜನಿಕಾಂತ್ ಆಗಮಿಸಿದ್ದಾರೆ. ಅವರ ಆಗಮನ ಅನೇಕರಿಗೆ ಸರ್​ಪ್ರೈಸ್ ನೀಡಿದೆ. 11:45ರವರೆಗೂ ರಜನಿಕಾಂತ್ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿ ಜೊತೆ ರಜನಿ ಮಾತುಕತೆ ನಡೆಸಿದ್ದಾರೆ.

ಸಿಬ್ಬಂದಿ ಜೊತೆ ಕೆಲ ಹೊತ್ತು ಮಾತನಾಡಿದ ಬಳಿಕ ರಜನಿಕಾಂತ್ ಅವರು ಡಿಪೋ ಒಳಗೆ ಸುತ್ತಾಡಿದ್ದಾರೆ. ಈ ಮೂಲಕ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಎಲ್ಲರೂ ರಜನಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ರಜನಿ ಹೀರೋ ಆಗುವುದಕ್ಕೂ ಮೊದಲು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಅವರು ಕೆಲಸ ಮಾಡಿದ್ದು ಜಯನಗರ ಡಿಪೋದಲ್ಲಿಯೇ. ಈ ಕಾರಣಕ್ಕೆ ಅವರು ಇಲ್ಲಿ ಆಗಮಿಸಿದ್ದಾರೆ.

Related