ರಾಜ್ಯ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ

ರಾಜ್ಯ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ

ಯಡ್ರಾಮಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂದೂತ್ವದ ಪರ ಎಂದು ಅಧಿಕಾರ ಹಿಡಿದು ಒಂದು ರಾಮ ಮಂದಿರ ಕಟ್ಟಿ ಸಾವಿರ ಮಂದಿರ ಕೆಡುವ ಕೆಲಸ ಮಾಡುತ್ತಿದೆ. ಹಿಂದೂ ಜನರ ಶಕ್ತಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮೊದಲು ಘಜನಿ, ಘೊರಿ ಅವರು ಹಿಂದೂ ದೇವಾಲಯ ಕೆಡುವುತ್ತಿದ್ದರು. ಆದರೆ ಬೊಮ್ಮಾಯಿ ಸರ್ಕಾರ ಹಿಂದೂ ದೇವಾಲಯ ತೆರವುಗೊಳಿಸುತ್ತಿದೆ ಎಂದು ರುದ್ರುಗೌಡ ಬಿರಾದಾರ ತಾಲ್ಲೂಕಿನ ಶ್ರೀ ರಾಮ ಸೇನೆ ಪ್ರಧಾನ ಕಾರ್ಯದರ್ಶಿಗಳು ಯಡ್ರಾಮಿ ತಾಲ್ಲೂಕಿನ ನಾಗರಳ್ಳಿ ಬಸವೇಶ್ವರ ವೃತ್ತದಲ್ಲಿ ಶ್ರೀ ರಾಮ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯವರ ನಂಜನಗೂಡಿನಲ್ಲಿ ಹಿಂದೂ ದೇವಾಲಯ ತೆರವುಗೊಳಿಸಿದ ಸರ್ಕಾರ ನಡೆಯನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ ಪ್ರತಿಭಟನೆ ಸರ್ಕಾರ ವಿರುದ್ಧ ಹರಿಹಾಯಿದರು.

ಸರ್ಕಾರ ಕೂಡಲೆ ತಮ್ಮ ನಿಲುವು ಬದಲಿಸಿ ಎಲ್ಲ ದೇವಾಲಯಗಳ ರಕ್ಷಣೆಗೆ ಬರಬೇಕು ಇವತ್ತು ಮೈಸೂರಿನಲ್ಲಿ ನಡದಿರುವ ಘಟನೆ ನಾಳೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡಿಯಬಹುದು ಆದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದರು. ಕೊರೋನಾ ಸಮಯದಲ್ಲಿ ಜನರಿಗೆ ಸಾಹಾಯ ಮಾಡುವ ಬದಲು ದೇವಾಲಯ ತೆರವುಗೊಳಿಸುವ ಕೆಲಸಕ್ಕೆ ನಿಂತಿರೊದು ನಾಚಿಕೆಗೇಡು ಸಂಗತಿ ಎಂದು ಸರ್ಕಾರದ ವಿರುದ್ದ ಶಾಂತಗೌಡ ಬಿರ್‍ದರ್ ಮನವಿ ಸಲ್ಲಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ಸಾಹೇಬ ಗೌಡ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಸಿದ್ದು. ಹಂಗರಗಿ, ದಯಾನಂದ. ಹಿರೆಮಠ, ಗುರಣ್ಣಗೌಡ. ಬಿರಾದಾರ, ಶಾಮಶಿವಾ. ಅಲ್ಲಾಪುರ, ಶಾಂತಗೌಡ . ಬಿರಾದಾರ, ಮುತ್ತು.ಸಾಹು, ರಮೇಶ.ಸಾಹು, ಬಸಲಿಂಗ.ಸಾಹು, ಆನಂದ. ಕುಸ್ತಿ, ಅರುಣಕುಮಾರ. ಹಿರೆಮಠ, ನಿಂಗಣ್ಣ. ಹಾದಿಮನಿ, ಸೊಮಣ್ಣ. ಮುಡ್ದಿ, ಕಿರಣ.ರಾಠೊಡ, ಸೀತಾರಾಮ, ಚವಾಣ, ರಾಮು. ಏವುರ, ದಿಲೀಪ್. ಕಾಂಬಳೆ, ಕಾಶಿ.ಕುಳಗೇರಿ, ಶ್ರೀದರ, ಕುಳಗೆರಿ, ಅಮರನಾಥ, ಸಾಹು, ಇನ್ನಿತರ ಹಿಂದೂ ಪರ ಸಂಘಟನೆಯ ಕಾರ್ಯಕರತರು ಮತ್ತು ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ನಡೆಯ ವಿರುದ್ಧ ಪ್ರತಿಭಟಿಸಿದರು.

Related