ಬಾಲಿವುಡ್ ಪಿಗ್ಗಿಗೆ 38 ವರ್ಷ

  • In Cinema
  • July 19, 2020
  • 433 Views
ಬಾಲಿವುಡ್ ಪಿಗ್ಗಿಗೆ 38 ವರ್ಷ

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ ಇಂದು 38ನೇ ಹುಟ್ಟುಹಬ್ಬ.

ಬಾಲಿವುಡ್‍ನಲ್ಲಿ ಪಿಗ್ಗಿ ಎಂದೇ ಕರೆಸಿಕೊಳ್ಳುವ ಪ್ರಿಯಾಂಕಾ, ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಇವರ ಜನುಮ ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ, ಸಿನಿಮಾ ರಂಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಿಯಾಂಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ ಪತಿ ಜಾನ್ ನಿಕೋಲಸ್, ನಿನ್ನ ಕಂಗಳಲ್ಲಿ ಕೊನೆಯವರೆಗೂ ನೋಡಿಕೊಳ್ಳಲು ಬಯಸುತ್ತೇನೆ. ನಾನು ನಿನ್ನನ್ನು ನಿತ್ಯವೂ ಪ್ರೀತಿಸುತ್ತೇನೆ. ನಿನ್ನದು ಅತ್ಯಂತ ಕಾಳಜಿ ಹಾಗೂ ಚಿಂತನಾಶೀಲ ವ್ಯಕ್ತಿತ್ವ. ನಿನ್ನಂತಹ ವ್ಯಕ್ತಿತ್ವದವರನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ. ನಾವಿಬ್ಬರೂ ಒಬ್ಬರಿಗೊಬ್ಬರೂ ಪರಸ್ಪರ ಅರ್ಥೈಸಿಕೊಂಡಿದ್ದೇವೆ. ಅದಕ್ಕೆ ನಾನು ತುಂಬಾ ಋಣಿಯಗಿದ್ದೇನೆ. ನಿನಗೆ ಜನುಮ ದಿನದ ಶುಭಾಶಯಗಳು ಎಂದು ಶುಭಕೋರಿದ್ದಾರೆ.

Related