ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ; ಹೊಸ ಬಾಂಬ್ ಸಿಡಿಸಿದ ದೇವರಾಜೇಗೌಡ..!

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ; ಹೊಸ ಬಾಂಬ್ ಸಿಡಿಸಿದ ದೇವರಾಜೇಗೌಡ..!

ಹಾಸನ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹೌದು, ಪ್ರಜ್ವಲ್ ರೇವಣ್ಣ ಅವರು ಸಾವಿರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವ್ಯಸಗಿರುವ ಆಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಈಗ ಬಿಜೆಪಿಯ ಕಾರ್ಯಕರ್ತ ದೇವರಾಜೇಗೌಡ ಸ್ಪೋಟಕ ಆರೋಪ ಒಂದನ್ನು ಮಾಡಿದ್ದಾರೆ.

ಹಾಸನ ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಹರಿಬಿಟ್ಟ ರೂವಾರಿ ಸಿಎಂ ಮತ್ತು ಡಿಸಿಎಂ. ಪೆನ್ ಡ್ರೈವ್ ಕಥಾ ನಾಯಕ ಕಾಂಗ್ರೆಸ್ ಸರ್ಕಾರ. ನನಗೆ ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದರು. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ರೇಂಜ್ ಆಫರ್ ಕೊಟ್ಟಿದ್ದಾರೆ, ಅಲ್ಲದೇ 2 ಗಂಟೆ 37ನಿಮಿಷ ಆಡಿಯೋ ಇದೆ ಎಂದು ದೇವರಾಜೇಗೌಡ ಸ್ಪೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ತಪ್ಪದೇ ಮತ ಚಲಾಯಿಸಿ: ಮಲ್ಲಿಕಾರ್ಜುನ ಖರ್ಗೆ

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಾಯಕ ದೇವರಾಜೇಗೌಡ ಅವರು ಮಾತನಾಡಿ, ಕಾರ್ತಿಕ್ ಬಿಡುಗಡೆ ಮಾಡಿರೋ ವೀಡಿಯೋದಲ್ಲಿ ಮಹಾನ್ ನಾಯಕನ ಹೆಸರು ಹೇಳಿದ್ದಾನೆ.

ಪುಟ್ಟಿ ಅಲಿಯಾಸ್ ಪುಟ್ಟರಾಜು ಇದ್ದಾರೆ. ಈ ಪೆನ್ ಡ್ರೈವ್ ಎಲ್ಲಿದೆ. ನನಗೆ ಸದಾಶಿವ ನಗರಕ್ಕೆ ಬರುವಂತೆ ಸೂಚಿಸಿರೋ ಆಡಿಯೋವೂ ಇದೆ. ಈ ಪ್ರಕರಣವನ್ನ CBI ಗೆ ಕೊಡಬೇಕು. ನಮಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.

ಯಾರನ್ನು ಆರೋಪಿ ಮಾಡಬೇಕೆಂದು ಸೂಚಿಸಿದ್ದಾರೆ. ಹಾಸನ ಪ್ರಭಾವಿ ರಾಜಕಾರಣಿ ವಿರುದ್ದ ನನ್ನ ಹೋರಾಟ. ನನ್ನ ಹೋರಾಟವನ್ನ ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದರು. ಎಲ್.ಆರ್ ಶಿವರಾಮೇಗೌಡ ಸರ್ಕಾರವನ್ನ ಸಿಗಾಕಿಸಬೇಡ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಹೆಸರನ್ನ ಹೇಳಬೇಡ ಎಂದ ಶಿವರಾಮೇಗೌಡ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ. ಅವರೇ ನನ್ನ ಜೊತೆ ಮತನಾಡಿದ್ದು. ಪೆನ್ ಡ್ರೈವ್ ವಿಚಾರವಾಗಿ ಕೂಡ ಮಾತಾಡಿದ್ದಾರೆ. ಪೆನ್ ಡ್ರೈವ್ ಕೊಟ್ಟವರನ್ನ ಹಿಡಿಯಲಿಲ್ಲ, ಸರ್ಕಾರ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ.

 

Related