ಕಳಪೆ ಮಟ್ಟದ ರಸ್ತೆ ಕಾಮಗಾರಿ

ಕಳಪೆ ಮಟ್ಟದ ರಸ್ತೆ ಕಾಮಗಾರಿ

ಚಿಕ್ಕೋಡಿ :- ಕುಣಿದು ಕುಣಿದು ಬಾರೇ, ಜಿಗಿದು ಜಿಗಿದು ಬಾರೇ, ನನ್ನ ಹೃದಯ ಒಳಗೆ ನೋವು ತಾರೆ. ಇದು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿರುವ ಸ್ವಗ್ರಾಮದಿಂದ ಬ್ಯಾಕೂಡ ಗ್ರಾಮಕ್ಕೆ ಹೋಗುವ ರಸ್ತೆ ಮೇಲೆ ಓಡಾಡುವವರು ಗುನುಗುವ ನೋವಿನ ಹಾಡು.

ಈ ರಸ್ತೆಯೂ ಕಡಿಕರಣ ಮಾಡಲು ಲೋಕೊಪಯೋಗಿ ಇಲಾಖೆಯಿಂದ ೫೦೦ ಮೀಟರ್ ಆದೇಶವಾಗಿದ್ದರು, ಅಲ್ಲಿಯ ಸ್ಥಳೀಯ ಪ್ರಭಾವಿಗಳು ಹಾಗೂ ಗುತ್ತಿಗೆದಾರರ ಹೊಂದಾಣಿಕೆಯಿAದ ಜನರ ಜೀವನದ ಜೊತೆಗೆ ಕಣ್ಣು ಮುಚ್ಚಾಲೆ ಆಟವಾಡುತ್ತಿದ್ದಾರೆ. ಲೋಕೊಪಯೋಗಿ ಇಲಾಖೆಯ ಆದೇಶದಂತೆ ೫೦೦ ಮೀಟರ್ ಕಡಿಕರಣಕ್ಕೆ ಸುಮಾರು ೪ ಲಕ್ಷ ರೂ, ಮಂಜೂರು ಮಾಡಿದ್ದರು ಸಹ ಆ ಗುತ್ತಿಗೆದಾರ ತಾನು ಕೆಲಸ ಮಾಡಿದೇ ಸ್ಥಳೀಯ ಪ್ರಭಾವಿ ನಾಯಕರಿಗೆ ಕೆಲಸ ಮಾಡಲು ನೀಡಿದ್ದಾನೆ, ಆದ್ದರಿಂದ ಆ ರಸ್ತೆಯು ಕಾಮಗಾರಿಯೂ ಸರಿಯಾಗದೇ ಇರುವುದಕ್ಕೆ ಸಾರ್ವಜನಿಕರು ಈ ಕಾಮಗಾರಿ ಕಳಪೆ ಮಟ್ಟದ ಕಾಮಗಾರಿಯಾಗಿದೆ ಎಂದು ಆರೋಪಿಸಿದ್ದಾರೆ.

ಬಾಕ್ಸ್ ನ್ಯೂಸ್ : ಈ ರಸ್ತೆ ಕಾಮಗಾರಿ ಮಾಡುವಲ್ಲಿ ಕಳಪೆ ಮಟ್ಟದ ಕಾಮಗಾರಿಯಾಗಿದೆ. ಗುತ್ತಿಗೆದಾರ ತಾನು ಮಾಡಬೇಕಾದ ಕೆಲಸವನ್ನು ಸ್ಥಳೀಯ ಪ್ರಭಾವಿಗೆ ರಸ್ತೆಯನ್ನು ಮಾಡಲು ಕೊಟ್ಟು ರಸ್ತೆಯನ್ನು ಸರಿಯಾಗಿ ಮಾಡದೇ ಕಳಪೆ ಮಟ್ಟದ ರಸ್ತೆಯನ್ನಾಗಿ ಮಾಡಿದ್ದಾರೆ. ೪ ಲಕ್ಷ ರೂ ಹಣಗಳಲ್ಲಿ ಈ ಕಳಪೆ ಮಟ್ಟದ ರಸ್ತೆಯೂ ಸುಮಾರು ೧ ಲಕ್ಷ ರೂ ಗಳಲ್ಲಿ ರಸ್ತೆ ಮಾಡಿ, ಕೈ ತೊಳೆದುಕೊಂಡಿದ್ದಾರೆ. ಆದ್ದರಿಂದ ಮೇಲಾಧಿಕಾರಿಗಳು ಈ ಕಳಪೆ ಮಟ್ಟದ ಕಾಮಗಾರಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ತಗೆದುಕೊಳ್ಳಬೇಕು. ಮಹಾದೇವ ಹೊಳಕರ ಗ್ರಾಮಸ್ಥ

Related