ಕೈಗಾರಿಕೆಗಳ ನಾಶಕ್ಕೆ ರಾಜಕಾರಣವೇ ಕಾರಣ

ಕೈಗಾರಿಕೆಗಳ ನಾಶಕ್ಕೆ ರಾಜಕಾರಣವೇ ಕಾರಣ

ಮಂಡ್ಯ : ರಾಜ್ಯದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಮಂಡ್ಯದ ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನರಾರಂಭವಾಗುತ್ತಿದ್ದು, ಬಾಯ್ಲರ್ ಪ್ರದೀಪನ 5000 ಟಿಸಿಡಿ ಸಾಮರ್ಥ್ಯ ವಿಸ್ತರಣೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮಾಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಚಾಲನೆ ನೀಡಿದರು.

ದುರ್ಗಾ ಮತ್ತು ಸುದರ್ಶನಾ ಹೋಮಾವನ್ನು ಸ್ವಾಮೀಜಿಗಳು ನಡೆಸಿದ್ದು, ನಿರಾಣಿ ಶುಗರ್ಸ್ ನಾಮಪಲಕವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು.

ಕಳೆದ ನಾಲ್ಕು ವರ್ಷದ ಹಿಂದೆ ನಷ್ಟದ ಕಾರಣ ಲಾಕೌಟ್ ಆಗಿದ್ದ ಪಿಎಸ್‌ಎಸ್‌ಕೆ ಕಾರ್ಖಾನೆ ಇದೀಗ ನಿರಾಣಿ ಷುಗರ್ಸ್ ಅಡಿಯಲ್ಲಿ ಕಾರ್ಯಾಚರಣೆ ಮಾಡಲಿದ್ದು, ಈ ಭಾಗದ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ನಾಶಕ್ಕೆ ರಾಜಕಾರಣವೇ ಕಾರಣ. ನಮ್ಮಗಳ ರಾಜಕಾರಣದಿಂದಲೆ ಜಿಲ್ಲೆಯಲ್ಲೇ ಹಲವು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ರಾಜಕಾರಣಿಗಳು ಕೂಡ ಕೈಗಾರಿಕೆಗಳ ಮೇಲೆ ಹಸ್ತಕ್ಷೇಪ ಮಾಡಬಾರದು ಎಂದು

Related