ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಹೈ ಅಲರ್ಟ್ ಆದ ಪೊಲೀಸರು!

ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಹೈ ಅಲರ್ಟ್ ಆದ ಪೊಲೀಸರು!

ಬೆಂಗಳೂರು: 2023 ಕಳೆದು 2024 ಬಂದೇ ಬಿಡ್ತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಅತಿ ವಿಜ್ರಮಣೆಯಿಂದ ಆಚರಿಸಲಾಗುತ್ತದೆ. 2024ನೆಯ ಹೊಸ ವರ್ಷ ಆಚರಣೆಯನ್ನು ಮಾಡುವಾಗ ಬೆಂಗಳೂರಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ಅದ್ಧೂರಿಯಾಗಿ ನಡೆಯಲಿರುವುದರಿಂದ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಈ ಮುನ್ಸೂಚನೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮಫ್ತಿಯಲ್ಲಿ ಈಗಾಗಲೇ ರೌಂಡ್ಸ್ ಹಾಕಲು ಶುರು ಮಾಡಿದ್ದಾರೆ.

ನಗರದ ಎಲ್ಲ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಹೈ ಅಲರ್ಟ್ ಆಗಿರುವಂತೆ ಡಿಸಿಪಿಗಳ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚನೆ ನೀಡಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್‌ಗಳು ಅಲರ್ಟ್ ಇರಬೇಕು. ಸಬ್ ಇನ್ಸ್ ಪೆಕ್ಟರ್‌ಗಳನ್ನು ಹೆಚ್ಚು ಬೀಟ್ ಮಾಡಬೇಕು. ಯುವಕರ ಗುಂಪು ಹಾಗೂ ಹೆಚ್ಚು ಜನಸಂದಣಿ ಇರೋ ಕಡೆ ನಿಗಾ ವಹಿಸಬೇಕು. ಅಲ್ಲದೇ ಏರಿಯಾದಲ್ಲಿ ಹಾಗೂ ರಸ್ತೆಗಳಲ್ಲಿ ಗುಂಪು ಇರುವ ಯುವಕರುಮೇಲೆ ನಿಗಾ ಇರಿಸಬೇಕು ಎಂದು ಸೂಚನೆ ನೀಡಿದ್ದಾರೆ.

 

Related