ಮೊದಲ ದಿನವೇ ʼತೂಫಾನ್ʼಗೆ ಪೈರಸಿ ಕಾಟ..!

  • In Cinema
  • July 16, 2021
  • 304 Views
ಮೊದಲ ದಿನವೇ ʼತೂಫಾನ್ʼಗೆ ಪೈರಸಿ ಕಾಟ..!

ಹೆಸರಾಂತ ಒಟಿಟಿ ಫ್ಲಾಟ್‌ಫಾರಂನಲ್ಲಿ ಒಂದಾದ ಅಮೆಜಾನ್ ಪ್ರೈಮ್ ನಲ್ಲಿ ಭಾರತದ ಸೇರಿದಂತೆ 240 ದೇಶಗಳಲ್ಲಿ ಶುಕ್ರವಾರ ಫರ್ಹಾನ್ ಅಖ್ತರ್, ಪರೇಶ್ ರಾವಲ್, ಸುಪ್ರಿಯಾ ಪಾಠಕ್ ನಟನೆಯ ತೂಫಾನ್ ಸಿನಿಮಾ ರಿಲೀಸ್ ಆಗಿದೆ.

ಭಾಗ್ ಮಿಲ್ಖಾ ಭಾಗ್ ಯಶಸ್ಸಿನ ಬಳಿಕ ಈ ಸಿನಿಮಾದ ಮೂಲಕ ಫರ್ಹಾನ್ ಹಾಗೂ ರಾಕೇಶ್ ಓಂಪ್ರಕಾಶ್ ಮೆಹ್ರಾ ಮತ್ತೆ ಒಂದಾಗಿ ಈ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಿದ್ದಾರೆ. ತೂಫಾನ್ ಸಿನಿಮಾ ಮೂಲಕ ಚಿತ್ರತಂಡ ಪ್ರೇಕ್ಷಕರಿಗೆ ಒಂದೊಳ್ಳೆ ಕತೆಯನ್ನ ಹೆಣೆದುಕೊಟ್ಟಿರೋದರ ನಡುವೆಯೇ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ದಿನವೇ ಹೆಚ್‌ಡಿ ಗುಣಮುಟ್ಟದ ಸಿನಿಮಾ ಇತರೆ ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ.

ಈ ರೀತಿ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲೇ ದಿನವೇ ಪೈರಸಿ ಕಾಟ ಅನುಭವಿಸಿರೋದ್ರಿಂದ ಟಿಆರ್‌ಪಿ ರೇಟಿಂಗ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಫರ್ಹಾನ್ ಅಖ್ತರ್‌ರ ತೂಫಾನ್ ಸಿನಿಮಾದ ಹೆಚ್‌ಡಿ ವಿಡಿಯೋ ತಮಿಳ್‌ರಾಕರ್ಸ್, ಟೆಲಿಗ್ರಾಂ, ಮೂವಿರುಲ್ಜ್ ಸೇರಿದಂತೆ ವಿವಿಧೆಡೆ ಸೋರಿಕೆ ಮಾಡಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಧಿಕೃತವಾಗಿ ಲಭ್ಯವಿರುವ ತೂಫಾನ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್, ಹುಸೇನ್ ದಲಾಲ್, ಮೋಹನ್ ಅಗಶೆ, ವಿಜಯ್ ರಾಝ್, ದರ್ಶನ್ ಕುಮಾರ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ಫರ್ಹಾನ್ ರಾಷ್ಟçಮಟ್ಟದ ಬಾಕ್ಸಿಂಗ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಪರೇಶ್ ರಾವಲ್ ಬಾಕ್ಸಿಂಗ್ ಕೋಚ್ ಆಗಿ ನಟಿಸಿದ್ದು ಅಕ್ತರ್‌ಗೆ ಕೇವಲ ಬಾಕ್ಸಿಂಗ್ ಮಾತ್ರವಲ್ಲದೇ ಜೀವನದ ಪಾಠವನ್ನೂ ಕಲಿಸುತ್ತಾರೆ.

Related