ಗೊಬ್ಬರವಿಲ್ಲದೆ ಕಂಗೆಟ್ಟ ರೈತರು; ಗೋಳು ಕೇಳುವವರಾರು?

ಗೊಬ್ಬರವಿಲ್ಲದೆ ಕಂಗೆಟ್ಟ ರೈತರು; ಗೋಳು ಕೇಳುವವರಾರು?

ಕೊಟ್ಟೂರು:ಪಟ್ಟಣದಲ್ಲಿ ಯೂರಿಯ ಗೊಬ್ಬರ ಖರೀದಿಗೆ ನಸುಕಿನಿಂದಲೂ ನಿಂತ ರೈತರ ಗೋಳನ್ನು ಕೇಳುವವರು ಯಾರು ಇಲ್ಲ

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಸುತ್ತಮುತ್ತಲಿನ ಹಳ್ಳಿಯಿಂದ ಮಹಿಳೆಯರು  ಚಿಕ್ಕ ಮಕ್ಕಳು, ವಯೋವೃದ್ಧರು ಅಡುಗೆ  ಮಾಡದೇ ಮನೆಯಲ್ಲಿ  ಬಿಟ್ಟು ಬಂದಿದ್ದೇವೆ. ಗಂಡನನ್ನು ಕಳುಹಿಸಿದರೆ ಹೊಲದಲ್ಲಿ ಕೆಲಸ ಹಾಳಾಗುತ್ತದೆ ಅದಕ್ಕಾಗಿ ನಾವೇ ಬಂದಿದ್ದೇವೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಕಷ್ಟಪಟ್ಟು ಹಲವು ಹೊಲದಲ್ಲಿ ಬಿತ್ತನೆ ಮಾಡಿದ್ದೇನೆ. ಆದರೆ ಗೊಬ್ಬರ ಮಾತ್ರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ರೈತರ ಗೋಳನ್ನು ಕೇಳುವವರು ಯಾರು? ಎಂದು ಪ್ರಗತಿಪರ ರೈತ ಎಎಂಬಿ ಪ್ರಭು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ರೈತರಾದ ನಾಗಯ್ಯ, ಚಂಡ್ರಯ್ಯ, ಶಿವು, ಎಂಬಿ ಪ್ರಭು, ಮಂಜಯ್ಯ, ಕುಮಾರ್, ನಾಗರಾಜ್ ಸರ್ಕಾರ ಯೂರಿಯಾ ಗೋಬ್ಬರ ಸಮರ್ಪಕವಾಗಿ ವಿತರಣೆ ಮಾಡಲಿ ಎಂದು ಒತ್ತಾಯಿಸಿದರು.

Related