ಕೊರೊನಾ ವೈರಸ್ ಗೆ 563 ಬಲಿ

ಕೊರೊನಾ ವೈರಸ್ ಗೆ 563 ಬಲಿ

ಬೀಜಿಂಗ್, ಫೆ. 6 : ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 563ಕ್ಕೆ ತಲುಪಿದೆ. ಜತೆಗೆ ವೈರಾಣು ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗಿದ್ದು 28,018 ಮುಟ್ಟಿದೆ ಎಂದು ಚೀನಾಅಧಿಕಾರಿಗಳು ಹೇಳಿದ್ದಾರೆ. ಚೀನಾದ ಹುಬೈಯಲ್ಲಿ ಈ ಮಹಾಮಾರಿಗೆ ತುತ್ತಾದವರು ಮತ್ತು ಬಲಿಯಾದವರು ಹೆಚ್ಚು ಮಂದಿ. ವರದಿ ಪ್ರಕಾರ ಮಂಗಳವಾರ 73 ಮಂದಿ ಮೃತಪಟ್ಟಿದ್ದು, 3,887 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೊಂದೆಡೆ, ವೈರಾಣು ಸೋಂಕಿನಿಂದ ಬಳಲುತ್ತಿದ್ದ ಸುಮಾರು 892 ಮಂದಿ ಚೇತರಿಸಿಕೊಂಡು ಸದ್ಯ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ.

ಬಿಲ್ಗೇಟ್ಸ್ 700 ಕೋಟಿ ರೂ. ದೇಣಿಗೆ: ವಿಶ್ವದ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಪತ್ನಿ ಮಿಲಿಂಡಾ ಅವರ ಪ್ರತಿಷ್ಠಾನ ಕೊರೊನಾ ವೈರಾಣು ನಿಯಂತ್ರಣ ಕ್ರಮಗಳಿಗಾಗಿ (ಲಸಿಕೆ ಅಭಿವೃದ್ಧಿ, ತಪಾಸಣೆ) ವಿಶ್ವ ಆರೋಗ್ಯ ಸಂಸ್ಥೆಗೆ 711 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದೆ.

ಹುಟ್ಟಿದ 30 ಗಂಟೆಯಲ್ಲಿ ಕೊರೊನಾ ಸೋಂಕು
ಕೊರೊನಾ ಜನ್ಮ ಕೇಂದ್ರ ಎನಿಸಿರುವ ವುಹಾನ್ ನಗರದ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವಿಕೆ ಜನಿಸಿದ 30 ಗಂಟೆಗಳಲ್ಲಿ ಕೊರೊನಾ ವೈರಾಣು ಸೋಂಕು ತಗುಲಿ

Related