ಪಠ್ಯ ಪರಿಷ್ಕರಣೆಗೆ ಕೇವಲ 5 ಸಾವಿರ ರೂ ಮಾತ್ರ

ಪಠ್ಯ ಪರಿಷ್ಕರಣೆಗೆ ಕೇವಲ 5 ಸಾವಿರ ರೂ ಮಾತ್ರ

2010ರಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿ 2.59 ಕೋಟಿ ಮತ್ತು ಪ್ರೊ ಮುಡಂಬಡಿತ್ತಾಯ ಸಮಿತಿ 3.63 ಕೋಟಿ ರೂ.ಯನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ನೀಡಿತ್ತು.

ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೊಸ ಪಠ್ಯ ಪುಸ್ತಕದಲ್ಲಿಯ ಕೆಲ ಅಂಶಗಳು ವಿವಾದಕ್ಕೆ ಕಾರಣವಾಗಿದ್ದು, ಬಹುತೇಕ ಮಠಾಧೀಶರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ವಿವಾದದ ಬಳಿಕ  ಪಠ್ಯ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದ್ದು, ಉಂಟಾಗಿರುವ ಲೋಪದೋಷಗಳ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿಯೇ ಮಕ್ಕಳಿಗೆ ಪುಸ್ತಕ ವಿತರಣೆ   ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿತ್ತು. ಅದಕ್ಕೂ ಮೊದಲು  ಅಂದ್ರೆ 2010ರಲ್ಲಿ ಮುಡಂಬಡಿತ್ತಾಯ ಸಮಿತಿ ಈ ಕೆಲಸವನ್ನು ಮಾಡಿತ್ತು.

ಇನ್ನು ಖರ್ಚಿನ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ನೋಡೋದಾದ್ರೆ ರೋಹಿತ್ ಚಕ್ರತೀರ್ಥ ಸಮಿತಿ ಕೇವಲ 5,200 ರೂ ಸಂಭಾವನೆ ಪಡೆದುಕೊಂಡಿದೆ. ಇನ್ನೂ 28,600 ರೂ ಹಣವನ್ನು ಬಾಕಿ ಉಳಿಸಿಕೊಂಡಿದೆ.  ಈ ಬಾರಿಯ ಸಮಿತಿ ಒಟ್ಟು 50 ಲಕ್ಷ ರೂ ಆಗಿದೆ.

ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆ ಐದಾರು ಪಟ್ಟು ಹೆಚ್ಚಳವಾಗಿತ್ತು. ಮುಡಂಬಡಿತ್ತಾಯ ಸಮಿತಿ  ಫೋನ್ ಖರೀದಿಗಾಗಿ 3 ಸಾವಿರ ರೂ ಮತ್ತು ಒಟ್ಟು ಪರಿಷ್ಕರಣೆ ವೆಚ್ಚ 3.63ಕೋಟಿ ರೂ.ಗಳಾಗಿತ್ತು.

Related