ಗಿಡಮೂಲಿಕೆಗಳ ಪರಂಪರೆಯ ಉಳಿವಿಗೆ ಯುವಜನತೆ ಶ್ರಮಿಸಲಿ

ಗಿಡಮೂಲಿಕೆಗಳ ಪರಂಪರೆಯ ಉಳಿವಿಗೆ ಯುವಜನತೆ ಶ್ರಮಿಸಲಿ

ರಾಮದುರ್ಗ:ಉತ್ತಮ ಪರಿಸರ ನಿರ್ಮಾಣ ಮಾಡಲು ವಿವಿಧ ಬಗೆಯ ಸಸಿಗಳನ್ನು ಬೆಳೆಸುವುದು ಅತ್ಯಂತ್ಯ ಮುಖ್ಯವಾಗಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಸಸ್ಯಗಳಲ್ಲಿಯ ಔಷಧೀಯ ಗುಣಗಳನ್ನು ತಿಳಿಸಿ ಅವುಗಳನ್ನು ಬೆಳೆಯುವಂತೆ ಪ್ರೇರಣೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ರುದ್ರಭೂಮಿಯಲ್ಲಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರಾತನ ಕಾಲದಲ್ಲಿ ಋಷಿಮುನಿಗಳು ಅರಣ್ಯದಲ್ಲಿಯ ಗಿಡಮೂಲಿಕೆಗಳಿಂದ ಹಲವಾರು ರೋಗಗಳಿಗೆ ಔಷಧ ಕಂಡು ಹಿಡಿದು ಉಪಚರಿಸುತ್ತಿದ್ದರು.                        ಹಾಗಾಗಿ ಅಂತಹ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆ ಮುಂದೆ ಬರಬೇಕು. ಅರಣ್ಯ ಇಲಾಖೆಯು ವಿವಿಧ ಬಗೆಯ ಗಿಡಗಳನ್ನು ರುದ್ರಭೂಮಿಯಲ್ಲಿ ನೆಟ್ಟು ಬೆಳೆಯಲು ಬೇಕಾದ ಪೂರಕ ವಾತಾವರಣ ನಿರ್ಮಿಸಲು ಅವರು ಸಲಹೆ ನೀಡಿದರು. ರುದ್ರಭೂಮಿಯ ಸೌಂದರ್ಯಕರಣಕ್ಕಾಗಿ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಿ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬಿಜೆಪಿ ತಾಲ್ಲೂಕಾಧ್ಯಕ್ಷ ರಾಜೇಶ ಬೀಳಗಿ, ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ, ಕುಮಾರ ಈಳಗೇರ, ನಿಂಗನಗೌಡ ಪಾಟೀಲ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Related