ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ

ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ

ಕೊಟ್ಟೂರು: ಪಟ್ಟಣದ ಉಜ್ಜಿನಿ ರಸ್ತೆ ತುಂಗಭದ್ರ ಕಾಲೇಜಿನ ಹಾಲದ ಮರದ ಹತ್ತಿರ ನಾಲ್ಕೈದು ತಿಂಗಳಿಂದ ರಸ್ತೆ ಪಕ್ಕದ ಚರಂಡಿ ಸ್ವಚ್ಛತೆಯಿಲ್ಲದೆ.ಸೊಳ್ಳೆಗಳು, ನೋಣಗಳು, ತುಂಬಿಕೊಂಡಿರುವುದರಿಂದ ಅನಾರೋಗ್ಯಕ್ಕೆ ಈಡಾಗುವ ಪರಿಸ್ಥಿತಿ ಹೆಚ್ಚಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ದಿನನಿತ್ಯ ಬಳಸುವ ಜಾಗವಾಗಿದ್ದು ಇಲ್ಲಿ ಸಾವಿರಾರು ಜನರು, ವಿದ್ಯಾರ್ಥಿಗಳು, ಹೊರಡುತ್ತಾರೆ. ಕೊಳಚೆ ನೀರು ಚರಂಡಿಯಲ್ಲಿ ನಿಂತಿರುತ್ತದೆ ಎಂದು ನಿವಾಸಿಗಳ ಆರೋಪವಾಗಿದೆ. ಈ ಭಾಗದಲ್ಲಿ ಮೂಲಭೂತಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು, ಚರಂಡಿಗಳ ಅಭಿವೃದ್ಧಿಯಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದರು.

Related