ನಾ ಹಿಂದು ನೀ ಹಿಂದು ಎಂದು ಹೋರಾಟ ಮಾಡಿದರೆ ಯಾರಿಗೂ ಏನು ಸಿಗೋದಿಲ್ಲ ಬರಿ ಬಿಜೆಪಿಗೆ ಲಾಭ: ಸಂತೋಷ್ ಲಾಡ್

ನಾ ಹಿಂದು ನೀ ಹಿಂದು ಎಂದು ಹೋರಾಟ ಮಾಡಿದರೆ ಯಾರಿಗೂ ಏನು ಸಿಗೋದಿಲ್ಲ ಬರಿ ಬಿಜೆಪಿಗೆ ಲಾಭ: ಸಂತೋಷ್ ಲಾಡ್

ಹುಬ್ಬಳ್ಳಿ: ಕಾನೂನಿನ ಪ್ರಕಾರ ಹಳೆಯ ಕೇಸುಗಳನ್ನು ಕೋಟಿಗೆ ಪ್ರೊಡ್ಯೂಸ್ ಮಾಡಿದ್ದಾರೆ ಆದರೆ ಕೋರ್ಟ್ ಅವರಿಗೆ ಬೇಲ್ ಕೊಟ್ಟಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಹುಬ್ಬಳ್ಳಿಯಲ್ಲಿದ್ದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಶ್ರೀಕಾಂತ್ ಪೂಜಾರಿಯನ್ನ ಮಾತ್ರ ಕಾನೂನಿನ ಪ್ರಕಾರ ಬಂದಿಸಲಾಗಿಲ್ಲ ಅವರ ಜೊತೆ ಇನ್ನೂ ಇತರರನ್ನು ಬಂಧಿಸಿದೆ. ಹಾಗಾಗಿ ಯಾರು ಇದನ್ನು ರಾಜಕೀಯ ಉದ್ದೇಶವಾಗಿ ಬಳಸಬಾರದೆಂದು ಹೇಳಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೂಡ ಶ್ರೀಕಾಂತ್ ಪೂಜಾರಿ ಮೇಲೆ ಕೇಸುಗಳು ದಾಖಲಾಗಿದ್ದವು. ಈಗ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ಕೂಡ ಶ್ರೀಕಾಂತ್ ಪೂಜಾರಿ ಅವರ ಮೇಲೆ ಹಲವಾರು ಕೇಸುಗಳು ದಾಖಲಾಗಿವೆ. ಆದರೆ ಇದನ್ನೇ ಮುಂದಿಟ್ಟುಕೊಂಡಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿಗಳೆಂದು ರಾಜದಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಿಂದ ಬಿಜೆಪಿ ಅವರಿಗೆ ಏನು ಸಿಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

ಸುಮಾರು 36 ಕೇಸ್ಗಳು ಇದ್ದವು. ಇದರಲ್ಲಿ 10 ಜನ ಮುಸ್ಲಿಂ ಕೂಡ ಇದ್ದಾರೆ. ಇದನ್ನು ಯಾರು ಪ್ರಶ್ನಿಸುತ್ತಿಲ್ಲ ಕೇವಲ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಕ್ಕೆ ಮಾತ್ರ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ 36 ಜನದಲ್ಲಿ ಶ್ರೀಕಾಂತ್ ಪೂಜಾರಿ ಬಿಟ್ಟು ಬೇರೆಯವರು ಹಿಂದೂ ಕೂಡ ಇದ್ದಾರೆ ಅವರೆಲ್ಲರನ್ನು ಬಿಟ್ಟು ಕೇವಲ ಶ್ರೀಕಾಂತ್ ಪೂಜಾರಿಗೆ ಮಾತ್ರ ಯಾಕೆ ಬಿಜೆಪಿ ಅವರು ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ನಡಿದಿರುವ ವಿಷಯ ಕೇಂದ್ರದಲ್ಲೂ ಚರ್ಚೆಯಾಗುತ್ತಿದೆ. ಆದರೆ ಮಣಿಪುರದಲ್ಲಿ ನಡೆದಿರುವ ಘಟನೆಯನ್ನು ಯಾರು ಕೂಡ ಪ್ರಶ್ನೆ ಮಾಡುತ್ತಿಲ್ಲ.

ಮಣಿಪುರದಲ್ಲಿ ಮಹಿಳೆಯರನ್ನ ಬೆತ್ತಲೆಗೊಳಿಸುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ಕಾಣುತ್ತಿದೆ ಆದರೆ ಇದನ್ನು ಯಾರು ಪ್ರಶ್ನಿಸುತ್ತಿಲ್ಲ. ಕೇವಲ ನಮ್ಮ ರಾಜ್ಯದಲ್ಲಾಗಿರುವ ಘಟನೆಯನ್ನು ಕೇಂದ್ರದಲ್ಲಿ ಚರ್ಚಿಸಲಾಗುತ್ತಿದೆ ಎಂದು ಗುಡುಗಿದ್ದಾರೆ.

ರಾಜ್ಯದಲಿ ನಾ ಹಿಂದೂ ನೀ ಹಿಂದೂ ಎಂದು ಹೋರಾಟ ಮಾಡುತ್ತಿದ್ದೀರಲ್ಲ ನಿಮ್ಮ ಮನೆಗೆನಾದರೂ ಸ್ಪೆಷಲ್ ಸ್ಕೀಮ್ ಬಂದಿದ್ಯ? ನಾನು ಕೂಡ ಹುಂದು ನಮ್ಮ ಮನೆಗೆ ಏನಾದರೂ ಸ್ಪೆಷಲ್ ಸ್ಕೀಮ್ ಬಂದಿದೆ ಎಂದು ವರದಿಗಾರರನ್ನು ಸಂತೋಷ್ ಲಾಡ್ ಪ್ರಶ್ನಿಸಿದರು.

ಇದು ಕೇವಲ ಬಿಜೆಪಿ ನಾಯಕರುಗಳಿಗೆ ಮಾತ್ರ ಲಾಭವಾಗುತ್ತದೆ ಹಾಗಂತ ಹೇಳಿ ರಾಜ್ಯದಲ್ಲಿರುವ ಹಿಂದೂ ನಾಯಕರುಗಳು ಯಾವುದೇ ಕಾರಣಕ್ಕೂ ದುಡುಕ ಬಾರದೆಂದು ಮನವಿ ಮಾಡಿದರು.

 

 

 

 

 

 

 

 

Related