ಭಾರತಕ್ಕೂ ಹೊಸ ಸೋಂಕು

ಭಾರತಕ್ಕೂ ಹೊಸ ಸೋಂಕು

ನವದೆಹಲಿ : ರಾಜ್ಯದಲ್ಲಿ  ಹೊಸ ಕೊರೋನಾ ವೈರಸ್ ಸೋಂಕಿನ ಅಲೆ ಶುರುವಾಗಿದೆ. ಇದರಿಂದಾಗಿ ಇಡೀ ವಿಶ್ವವೇ ಅಲರ್ಟ್ ಆಗಿದೆ. ಇತ್ತಾ ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೆಹಲಿಯಲ್ಲಿ ಐವರಿಗೆ, ಚೆನ್ನೈನಲ್ಲಿ ಒಬ್ಬರಿಗೂ ಹೊಸ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದಂತ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಸೋಂಕಿನ ಹಿನ್ನಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂತಹ 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.

ಇಂಗ್ಲೆಂಡ್, ಬ್ರಿಟನ್‌ನಿಂದ ಭಾರತಕ್ಕೆ ಬಂದಂತ 6 ಜನರಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕ ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.

Related