ಮಾಜಿ ಸಿಎಂ ಮನವಿಗೆ ಸ್ಪಂದಿಸಿ ಧರಣಿ ನಿಲ್ಲಿಸಿದ ಮುನಿರತ್ನ

ಮಾಜಿ ಸಿಎಂ ಮನವಿಗೆ ಸ್ಪಂದಿಸಿ ಧರಣಿ ನಿಲ್ಲಿಸಿದ ಮುನಿರತ್ನ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಮೇಲೆ ಇಲ್ಲದ ಸಲದ ಆರೋಪಗಳನ್ನು ಹೇರುತ್ತಿದ್ದಾರೆ ಎಂದು ರ್‌ಆರ್ ನಗರದ ಕ್ಷೇತ್ರದ ಶಾಸಕ ಮುನಿರತ್ನ ಅವರು ಇಂದು ಪ್ರತಿಭಟನೆ ನಡೆಸಿದರು.

ಇನ್ನು ಡಿಕೆ ಬ್ರದರ್ಸ್ ತನ್ನ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಶಾಸಕ ಮುನಿರತ್ನ ಇಂದು ಬೆಳಗ್ಗಿನಿಂದ ಒಂದು ದಿನದ ಮೌನ ಉಪವಾಸ ಪ್ರತಿಭಟನೆ ನಡೆಸುತ್ತಿದ್ದಾರೆ. ಮುನಿರತ್ನ ಜೊತೆಗೆ ಅವರ ಬೆಂಬಲಿಗರೂ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಮಹಾತ್ಮಾ ಗಾಂಧಿ ಪ್ರತಿಮೆಗೆ ಕೈ‌ ಮುಗಿದು ಮುನಿರತ್ನ ಉಪವಾಸ ಸತ್ಯಾಗ್ರಹ ಆರಂಭಿಸಿತ್ತಿದ್ದಂತೆ ಮುನಿರತ್ನ ಜೊತೆ ಬೆಂಬಲಿಗರಾದ ಬಿಬಿಎಂಪಿ ಮಾಜಿ ಮೇಯರ್ ನಾರಾಯಣಸ್ವಾಮಿ ಮತ್ತು ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಪ್ರತಿಭಟನೆಯಲ್ಲಿ ಭಾಗಿಯಾದರು. ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಭಾವಚಿತ್ರವುಳ್ಳ ಫೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ ಮುನಿರತ್ನ ಸಹಿತ ಅವರ ಬೆಂಬಲಿಗರು, ಆರ್ ಆರ್ ನಗರ ಕ್ಷೇತ್ರಕ್ಕೆ ಬಿಡುಗಡೆ ಆಗಿದ್ದ ಅನುದಾನವನ್ನು, ಬೇರೆ ಕ್ಷೇತ್ರಕ್ಕೆ ಕೊಟ್ಟಿರೋದು ನ್ಯಾಯವೇ ಎಂಬ ಪೋಸ್ಟರ್ ಅನ್ನು ಸಹ ಹಿಡಿದರು ಮೌನ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಅದಕ್ಕೆ ಮುನಿರತ್ನ ಬೆಂಬಲಿಗರು ಒಪ್ಪದೇ ಇದ್ದಾಗ ಶಾಸಕ ಮುನಿರತ್ನ ಹೊರತುಪಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಳಿದ ಎಲ್ಲಾ ಸುಮಾರು 25 ಕ್ಕೂ ಹೆಚ್ಚು ಪ್ರತಿಭಟನಾ ನಿರತ ಮುನಿರತ್ನ ಬೆಂಬಲಿಗರಾದ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು.

ನಂತರ ತನ್ನ ಜೊತೆ ಯಾರೂ ಇಲ್ಲದಾಗ ಏಕಾಂಗಿಯಾದ ಮುನಿರತ್ನ ಒಬ್ಬರೇ ಪ್ರತಿಭಟನೆಯನ್ನು ಮುಂದುವರಿಸಿದರು. ಮುನಿರತ್ನ ಬೆಂಬಲಿಗರಿಗೆ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪೊಲೀಸರು 25ಕ್ಕೂ ಹೆಚ್ಚು ಬೆಂಬಲಿಗರನ್ನು ವಶಕ್ಕೆ ಪಡೆದರು.

ಇನ್ನು ಮುನಿರತ್ನ ನಡೆಸುತ್ತಿರುವ ಪ್ರತಿಭಟನೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಅವರು ಕೂಡ ಭಾಗವಹಿಸಿ ಮುನಿರತ್ನರನ್ನು ಮನವೊಲಿಸಿದರು. ನಾನು ಸಿಎಂ ಜೊತೆ ಮಾತನಾಡುತ್ತೇನೆ ದಯವಿಟ್ಟು ಉಪವಾಸ ಸತ್ಯಾಗ್ರಹ ಕೈ ಬಿಡಿ ಎಂದು ಮನವಿ ಮಾಡಿದರು. ಮಾಜಿ ಸಿಎಂ ಮನವಿಗೆ ಸ್ಪಂದಿಸಿದ ಮುನಿರತ್ನ ಧರಣಿಯನ್ನು ಕೊನೆಗೊಳಿಸಿದರು.

Related