ದೇಶದ್ರೋಹದ ವಿಚಾರ ಕೇಂದ್ರಕ್ಕೆ ಹೆಚ್ಚು ಅನ್ವಯಿಸುತ್ತದೆ

ದೇಶದ್ರೋಹದ ವಿಚಾರ ಕೇಂದ್ರಕ್ಕೆ ಹೆಚ್ಚು ಅನ್ವಯಿಸುತ್ತದೆ

ಬೆಂಗಳೂರು, ಫೆ. 22: ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಅಗರದಲ್ಲಿ ಸಮರ್ಥನಂ ಟ್ರಸ್ಟ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಭಾಗವಹಿಸಿ ಮಾತನಾಡಿ, ದೇಶದ್ರೋಹದ ವಿಚಾರ ರಾಜ್ಯದೆಲ್ಲೆಡೆ ಬುಗಿಲೇಳುತ್ತಿದೆ. ಹೀಗಾಗಿ ದೇಶದ್ರೋಹದ ವಿರುದ್ಧ ಮಾತನಾಡಿರುವವರ ಬಗ್ಗೆ ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಸೇರಿಕೊಂಡು ಜಂಟಿಯಾಗಿ ಕಾರ್ಯಾಚರಣೆ ಮಾಡಬೇಕಾಗಿರುವ ಅವಶ್ಯಕತೆ ಇದೆ ಎಂದರು.

ಕಾನೂನು ಪಾಲನೆ ಕೇವಲ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದರೆ ದೇಶದ್ರೋಹದ ವಿಚಾರ ಕೇಂದ್ರಕ್ಕೆ ಹೆಚ್ಚು ಅನ್ವಯಿಸುತ್ತದೆ. ದೇಶದ್ರೋಹದ ವಿಚಾರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇರುವುದರಿಂದ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಜೋಡಿಸಬೇಕಾಗಿದೆ ಎಂದರು.

ಕಳೆದ ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮೂಲಕ ಪೇಚಿಕೆ ಸಿಲುಕೊಂಡು ಜೈಲು ಸೇರಿದ್ದಾರೆ. ಇತ್ತ ಸಿಲಿಕಾನ್‌ಸಿಟಿ  ಬೆಂಗಳೂರಿನಲ್ಲಿ ನಿನ್ನೆ ಹಾಗೂ ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಯುವತಿಯರಿಬ್ಬರು  ಪಾಕಿಸ್ತಾನ ಜಿಂದಾಬಾದ್ ಎಂದು ಬೃಹತ್ ವೇದಿಕೆಯಲ್ಲಿ ದೇಶದ್ರೋಹದ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ  ಆಯೋಜನೆ ಮಾಡಿರುವ ಸಂಘಟನೆ ಹಾಗೂ ವೇದಿಕೆಯಲ್ಲಿದ್ದವರು ಯಾರೇ ಆಗಿದ್ದರೂ ಸಹಾ ಅವರನ್ನು ತನಿಖೆಗೆ ಒಳಪಡಿಸಬೇಕು. ಅವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಬೇಕೆಂದು ಒತ್ತಾಯಿಸಿದರು.

Related