ಬಾಡಿಗೆ ಕಟ್ಟಲು ಪರದಾಡುತ್ತಿದ್ದ ವಿಜಾಯ್ ದೇವರ ಕೊಂಡ, ಇಂದು ಅಪಾರ ಸಂಪತ್ತಿಗೆ ಮಾಲಿಕ

ದಕ್ಷಿಣ ಭಾರತದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ (Vijay Devarakonda ) ಅವರಿಗೆ 33 ವರ್ಷಗಳ ಸಂಭ್ರಮ. ಮೇ 9, 1989 ರಂದು ಹೈದರಾಬಾದ್‌ನಲ್ಲಿ ಜನಿಸಿದ ವಿಜಯ್ ತಮ್ಮ 11 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಮನ್ನಣೆ ಸಿಕ್ಕಿದ್ದು ಅರ್ಜುನ್ ರೆಡ್ಡಿ ಚಿತ್ರದಿಂದ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ನಂತರ, ಅದೇ ಚಿತ್ರದ ಹಿಂದಿ ರಿಮೇಕ್ ಮಾಡಲಾಯಿತು.ವಿಜಯ್ ಅವರ ವೈಯಕ್ತಿಕ ಜೀವನ ತುಂಬಾ ಆಸಕ್ತಿದಾಯಕವಾಗಿದೆ. ಅವರು ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ. ಆದರೆ ಹಿಂದೊಮ್ಮೆ ಅವರ ಜೀವನದಲ್ಲಿ ಅವರ ಮನೆಯ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ ವಿಜಯ್ ದೇವರಕೊಂಡ ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಇಲ್ಲಿವೆ.

ನಟ ವಿಜಯ್ ಸೌತ್‌ ಸಿನಿಮಾದ ಹ್ಯಾಂಡ್ಸ್‌ಮ್‌ ಹಂಕ್‌ ಹಾಗೂ ಫ್ಯಾನ್ಸ್‌ನ ಹಾರ್ಟ್‌ಥ್ರೋಬ್‌. ತಮ್ಮ ಲುಕ್‌ ಮತ್ತು ನಟನೆಯಿಂದ  ಸಾಕಷ್ಟು ಪ್ರಸಿದ್ಧರಾಗಿದ್ದಾರೆ ಹಾಗೂ  ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.  ಮುಂದಿನ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನಟ ತಮ್ಮ ಮುಂಬರುವ ಚಿತ್ರ ಲಿಗರ್‌ ಕಾರಣದಿಂದ  ಸುದ್ದಿಯಲ್ಲಿದ್ದಾರೆ. ಜಗನ್ನಾಥ್ ಪುರಿ ಅವರ ಈ ಚಿತ್ರದಲ್ಲಿ, ಅನನ್ಯಾ ಪಾಂಡೆ ಅವರೊಂದಿಗೆ ವಿಜಯ್ ದೇವರಕೊಂಡ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ವಿಶ್ವ ಪ್ರಸಿದ್ಧ ಬಾಕ್ಸರ್ ಮೈಕ್ ಟೈಸನ್ ವಿಜಯ್ ಅವರ ಲಿಗರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.

ಇನ್ನೂ ವಿಜಯ್ ದೇವರಕೊಂಡ ಅವರ ಜೀವನಶೈಲಿಯ ಬಗ್ಗೆ ಹೇಳುವುದಾದರೆ ಅವರು ತಮ್ಮ ಆರಂಭಿಕ ಹಂತದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಸಂಕಷ್ಟವನ್ನೂ ಎದುರಿಸಿದ್ದಾರೆ. ಆದರೆ ಇಂದು ಅವರು ಸುಮಾರು 30 ಕೋಟಿ ಮೌಲ್ಯದ ಆಸ್ತಿಯ ಮಾಲೀಕ.
ಅರ್ಜುನ್ ರೆಡ್ಡಿ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಶಸ್ತಿಯನ್ನು ಹರಾಜು ಹಾಕಿ ಬಂದ ಹಣವನ್ನು ವಿಪತ್ತು ಪರಿಹಾರ ನಿಧಿಗೆ ನೀಡಿದರು.

Related