ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ..!

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ..!

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿಯವರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ.

1. ಬೆಂಗಳೂರು ಜನತೆಯ ಬಹುಕಾಲದ ಬೇಡಿಕೆಯಾದ  ಉಪನಗರ ರೈಲು ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ ಕಾರಣವಲ್ಲವೇ? ಈ ಯೋಜನೆಯ ಚಾಲನೆ ಇಷ್ಟೊಂದು ವಿಳಂಬವಾಗಲು ಕೇಂದ್ರ ಸರ್ಕಾರವೇ ಹೊಣೆಯಲ್ಲವೇ?

2.ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರಲು ಹೊರಟಿದ್ದಾರೆ. ನರೇಂದ್ರ ಮೋದಿ ಅವರೇ, ಕನ್ನಡದ ಅಸ್ಮಿತೆಯ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮೌನ ಅಮಿತ್ ಶಾ ಅವರ ಹೇಳಿಕೆಗೆ ಸಹಮತವೋ?

3.ಬೆಂಗಳೂರು ನಗರಕ್ಕೆ ಕುಡಿಯುವ ನೀರುಣಿಸುವ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಏಕೆ? ಇದಕ್ಕೆ ಕಾರಣ ತಮಿಳುನಾಡು ಸರ್ಕಾರದ ಒತ್ತಡವೇ? ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ ಪೂರ್ವಗ್ರಹವೆ?

4.ದೇಶದ ರೈತರ ಪ್ರತಿರೋಧಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯ ವರೆಗೆ ಕಾಯ್ದೆಗಳನ್ನು ರದ್ದು ಮಾಡಿಲ್ಲ. ಇದು ನಿಮ್ಮ ಸೂಚನೆಯಂತೆಯೇ ನಡೆದಿದ್ದೋ? ಇಲ್ಲವೇ ರಾಜ್ಯ ಸರ್ಕಾರದ ರೈತವಿರೋಧಿ ನೀತಿಯೇ?

5.ಮೂಲಯೋಜನೆಯ ಪ್ರಕಾರ ಬೆಂಗಳೂರು ಉಪನಗರ ರೈಲು ಯೋಜನೆಯ ಶೇಕಡಾ 20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಈ 20% ವೆಚ್ಚವನ್ನು ಕೇಂದ್ರ ಸರ್ಕಾರ ನೀಡಿದೆಯೇ? ಇಲ್ಲವೇ ಇದು ಇನ್ನೊಂದು ಜುಮ್ಲಾವೇ..?

6.ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ತಮಗೆ ಪತ್ರ ಬರೆದು ರಾಜ್ಯದ ನಿಮ್ಮದೇ ಬಿಜೆಪಿ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿದ್ದಾರೆ.
ನಾ ಖಾವೂಂಗ, ನಾ ಖಾನೇದೂಂಗ ಎನ್ನುವ ನಿಮ್ಮ ಮಾತು ಸತ್ಯವೇ ಆಗಿದ್ದರೆ ಈ ಹಗರಣದ ತನಿಖೆ ಯಾವಾಗ ಮಾಡಿಸುತ್ತೀರಿ..?

 

Related