ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್ ಮಹತ್ವದ ಸಲಹೆ

ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್ ಮಹತ್ವದ ಸಲಹೆ

ಬೆಂಗಳೂರು :  ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿನಿಂದ ರಾಜ್ಯದಲ್ಲಿ ಮುಚ್ಚಲ್ಪಟ್ಟಿದ್ದ ಪದವಿ ಕಾಲೇಜುಗಳು ಇಂದಿನಿಂದ ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜುಗಳ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮ ತಪ್ಪದೆ ಪಾಲಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮೂಲಕ ಮನವಿ ಮಾಡಿದ್ದಾರೆ.

ಇಂದಿನಿಂದ ರಾಜ್ಯಾದ್ಯಂತ ಅಂತಿಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಕೋವಿಡ್-19 ಪರೀಕ್ಷೆ  ಮಾಡಿಸಿಕೊಂಡು  ನೆಗೆಟಿವ್  ವರದಿ  ಹಾಗೂ  ಪೋಷಕರ  ಒಪ್ಪಿಗೆ  ಪತ್ರದೊಂದಿಗೆ  ಬರುವಂತೆ  ಸೂಚಿಸಲಾಗಿತ್ತು.

ಡಿಪ್ಲೊಮಾ, ಇಂಜನಿಯರಿಂಗ್  ಹಾಗೂ  ವಿವಿಧ  ಪದವಿಯ  ಅಂತಿಮ  ವರ್ಷದ  ತರಗತಿಗಳು ಮಾತ್ರ ಇಂದಿನಿಂದ ಆರಂಭಗೊಂಡಿವೆ. ವಿದ್ಯಾರ್ಥಿಗಳಿಗೆ  ತರಗತಿಗೆ  ಹಾಜರಾಗುವುದು  ಕಡ್ಡಾಯವಲ್ಲ. ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯಗೊಳಿಸುವಂತಿಲ್ಲ.

ಕಾಲೇಜಿಗೆ ಹಾಜರಾಗುವುದು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಆಯ್ಕೆಗೆ ಬಿಟ್ಟಿದ್ದು. ಆಫ್‍ಲೈನ್‍ ಮತ್ತು ಆನ್‍ಲೈನ್  ತರಗತಿಗಳು ಮುಂದುವರೆಯಲಿವೆ.  ಕಾಲೇಜಿಗೆ  ಹಾಜರಾಗಿದ್ದರೆ  ಆನ್‍ಲೈನ್   ತರಗತಿ ಮೂಲಕ ತಮ್ಮ ಅಭ್ಯಾಸ ಮುಂದುವರಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

Related