ನಿಧಿಮಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಾರ್ಲಿಂಗ್ ಕೃಷ್ಣ..!

ನಿಧಿಮಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಾರ್ಲಿಂಗ್ ಕೃಷ್ಣ..!

ಲವ್ ಮಾಕ್ಟೇಲ್ ಸಿನಿಮಾದ ಹಿಟ್‍ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ವರ್ಷದ ಆರಂಭದಲ್ಲಿ ಸಿನಿಪ್ರಿಯರಿಗೆ ಪ್ರೇಮ-ಪ್ರೀತಿ ಬಗ್ಗೆ ಒಂದು ಒಳ್ಳೆ  ಬಿಗ್ ಹಿಟ್ ಸಿನಿಮಾ ಕೊಟ್ಟಿದ್ದರು. ವಿಭಿನ್ನ ಪ್ರೇಮಕಥೆಯ ಮೂಲಕ ಎಲ್ಲರ ದಿಲ್ ಕದ್ದ ನಿಧಿಮಾ ಪಾತ್ರದಾರಿ ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಮಿಲನಾ ನಾಗರಾಜ್‍ ಅವರ ಹುಟ್ಟುಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ವಿಶ್ ಮಾಡಿದ್ದಾರೆ.

ಯೂತ್ಸ್ ಮನಗೆದ್ದ ಈ ಸ್ಟಾರ್ಟ್ ಡಾರ್ಲಿಂಗ್ ಕೃಷ್ಣ ಇಂದು ಮಿಲನಾ ನಾಗರಾಜ್‍ ಅವರ ಹುಟ್ಟುಹಬ್ಬಕ್ಕೆ ತಮ್ಮ ಟ್ವೀಟರ್ ಮೂಲಕ ನಿಧಿಮಾಗೆ ವಿಶ್ ಮಾಡಿದ್ದಾರೆ. ‘ನಿಮ್ಮ ಪ್ರೀತಿ, ನಿಮ್ಮ ಹೃದಯ, ಆ ನಿಮ್ಮ ನಗು ಪ್ಯೂರ್‍ ಆಗಿದೆ. ನಿಮ್ಮನ್ನು ಪಡೆಯಲು ನಾನು ಅದೃಷ್ಟವಂತ. ನಿಜವಾದ ಸಂತೋಷ ಏನು ಎಂಬುದನ್ನು ನನಗೆ ನೀವು ತೋರಿಸಿ ಕೊಟ್ಟಿದ್ದೀರಾ. ಹ್ಯಾಪಿ ಬರ್ತ್‍ಡೇ ಮಿಲನಾ ನಾಗರಾಜ್ ಲವ್ ಯೂ ಬೇಬೂ..’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಕ್ಯೂಟ್ ಕಪಲ್ ಗಳ ಮದುವೆ ಮಾತುಕತೆ ನಡೆದಿದೆ. ಎರಡು ಕುಟುಂಬದವರಿಂದ ಒಪ್ಪಿಗೆ ಸಿಕ್ಕಿದ್ದರಿಂದ ಮದುವೆ ಆಗಲು ಮಿಲನಾ-ಕೃಷ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದಷ್ಟು ಬೇಗ ಮದುವೆಯಾಗಲಿ ಅನ್ನೋಂದು ಅವರ ಅಭಿಮಾನಿಗಳ ಆಶಯ.

Related