ಮೆಟ್ರೋ, ಚಿತ್ರಮಂದಿರ, ಕ್ಲಬ್ ಪುನರಾರಂಭ?

ಮೆಟ್ರೋ, ಚಿತ್ರಮಂದಿರ, ಕ್ಲಬ್ ಪುನರಾರಂಭ?

ಬೆಂಗಳೂರು : ಲಾಕ್‌ಡೌನ್ ವೇಳೆ ವಿಧಿಸಲಾಗಿದ್ದ ನಿಬಂಧನೆಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿಗೆ ಬುಧವಾರ ಮನವಿ ಮಾಡಲಿದ್ದು, ಇನ್ನಷ್ಟು ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅನ್‌ಲಾಕ್‌ಡೌನ್ ಕುರಿತಂತೆ ಸಿಎಂ ಬಿಎಸ್‌ವೈ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಸಡಿಲೀಕರಣ ಮಾಡುವಂತೆ ಕೋರಲಿದ್ದು, ಮೆಟ್ರೋ ರೈಲು ಸಂಚಾರ, ಚಿತ್ರಮಂದಿರಗಳು, ಜಿಮ್ ಕೇಂದ್ರಗಳು, ಕ್ಲಬ್‌ಗಳು ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಇಡುವ ಸಾಧ್ಯತೆ ಇದೆ.

ಮೋದಿಗೆ ಸಿಎಂ ಮನವಿ

ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು ಸರಿಸುಮಾರು ಎರಡೂವರೆ ತಿಂಗಳಾಗಿದೆ. ಕನಿಷ್ಟ ದಿನಕ್ಕೆ 8 ರಿಂದ 10 ಲಕ್ಷ ಜನ ಸಂಚಾರ ಮಾಡುತ್ತಿದ್ದರು. ಮಧ್ಯಮ ವರ್ಗದವರು, ಸರ್ಕಾರಿ ಹಾಗೂ ಖಾಸಗಿ ನೌಕರರು ಮೆಟ್ರೋ ಅವಲಂಬಿತರಾಗಿದ್ದರು. ಇಲ್ಲಿಯೂ ಕೂಡ ಯಥಾರೀತಿ ನಿಬಂಧನೆಗಳನ್ನು ವಿಧಿಸುತ್ತೇವೆ. ಹೀಗಾಗಿ ಮೆಟ್ರೋ ರೈಲು ಸಂಚಾರಕ್ಕೂ ಅನುವು ಮಾಡಿಕೊಡುವಂತೆ ಪಿಎಂಗೆ ಸಿಎಂ ಮನವಿ ಮಾಡುವರೆಂದು ತಿಳಿದುಬಂದಿದೆ.

ಪ್ರಧಾನಿ ಅಸ್ತುವಿನ ಕುತೂಹಲ

ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ, ರಾಜಸ್ಥಾನ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಸೇರಿದಂತೆ ಮತ್ತಿತರ ರಾಜ್ಯಗಳಿಂದ ಬಂದವರಿAದ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇದರ ಪ್ರಮಾಣ ಅತ್ಯಂತ ಸಣ್ಣ ಪ್ರಮಾಣದಲ್ಲಿದೆ. ಮರಣ ಹೊಂದಿದವರು, ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಉಳಿದ ಚಟುವಟಿಕೆಗಳನ್ನು ಪುನರಾರಂಭಿಸಬೇಕೆAಬ ಕೋರಿಕೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಯವರ ಬೇಡಿಕೆಗೆ ಪ್ರಧಾನಿ ಅಸ್ತು ಎನ್ನುವರೇ ಎಂಬ ಕುತೂಹಲ ಎಲ್ಲರಲ್ಲಿದೆ.

Related