ವಿದ್ಯುತ್ ತಂತಿ ತಗುಲಿ ಮರುಜನ ಸಾವು; ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದೇನು?

ವಿದ್ಯುತ್ ತಂತಿ ತಗುಲಿ ಮರುಜನ ಸಾವು; ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದೇನು?

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಯಶ್ ರವರ ಹುಟ್ಟುಹಬ್ಬದ ಸಂಭ್ರಮಕ್ಕೆಂದು ಅಭಿಮಾನಿಗಳು ಯಶ್ ನ ಕಟ್ ಔಟ್ ಕಟ್ಟುವ ಸಂದರ್ಭದಲ್ಲಿ ಮೂರು ಜನ ಯುವಕರು ಸಾವನ್ನು ಸಾವನ್ನುಪ್ಪಿರುವ ಪ್ರಕರಣ ನಡೆದಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಎಚ್ ಕೆ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿಮಾನದ ಉತ್ಸಾಹ ಮತ್ತು ಹುರುಪಿನಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರ್ದೈವಕರ ಸಂಗತಿ. ಪ್ರಕರಣದಲ್ಲಿ ಇನ್ನೂ ಮೂವರು ಯುವಕರು ಗಾಯಗೊಂಡಿದ್ದು ಅವರನ್ನು ಲಕ್ಷ್ಮೇಶ್ವರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಗಾಗಲೇ ಮೂವರಲ್ಲೊಬ್ಬ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾನೆ ಅದರೆ ಉಳಿದಿಬ್ಬರ ಸ್ಥಿತಿ ಗಂಭೀರವಾಗಿರುವುದರಿಂದ ಗದಗ ಜಿಲ್ಲಾಸ್ಪತ್ರೆಗೆ (ಜಿಮ್ಸ್) ಸ್ಥಳಾಂತರಿಸಲಾಗಿದೆ ಎಂದು ಸಚಿವ ಹೇಳಿದರು. ವಿಷಯ ಗೊತ್ತಾದ ಕೂಡಲೇ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ ಪಾಟೀಲರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿರುವರೆಂದು ಹೇಳಿದರು. ಇನ್ನುಅತ್ಯಂತ ಬಡ ಕುಟುಂಬದಿಂದ ಬಂದಂತ ಪರಿಶಿಷ್ಟ ಜಾತಿಯ ಯುವಕರಂದು ತಿಳಿದು ಬಂದಿದೆ.

Related