ಫೆ.29 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಫೆ.29 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಬೆಂಗಳೂರು: ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಪ್ರತಿವರ್ಷದಂತೆ ನಗರದ ಬನಶಂಕರಿ ದೇವಾಲಯದ ಅವರಣದಲ್ಲಿ ನಡೆಸಿಕೊಂಡು ಬರುತ್ತಿರುವ 25 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವನಡೆಸುತ್ತಿದ್ದು, ಮುಂದಿನ ವರ್ಷ ಫೆಬ್ರವರಿ 29 ರಂದು ನಡೆಯಲಿದೆ ಎಂದು ವೇದಿಕೆ ವ್ಯವಸ್ಥಾಪಕರಾದ ಎ.ಹೆಚ್. ಬಸವರಾಜು ಹೇಳಿದರು.

ಪ್ರೆಸ್‌ ಕ್ಲಬ್‌ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 24 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಇದುವರೆಗೂ ನಮ್ಮ ವೇದಿಕೆಯಿಂದ 1431ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಉತ್ತಮ ಜೀವನ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ದುಬಾರಿಯಾಗುತ್ತಿರುವ ಮದುವೆ ವೆಚ್ಚವನ್ನು ಬಡವರು, ಹಿಂದುಳಿದ ವರ್ಗದವವರು ಭರಿಸಲು ಸಾಧ್ಯವಿಲ್ಲ ಎಂಬುದನ್ನು ಪರಿಗಣಿಸಿ ನಾವು 24 ವರ್ಷದ ಹಿಂದೆ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ರಚಿಸಿಕೊಂಡು ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಫೆ.29 ರಂದು ಕಾರ್ಯಕ್ರಮ ನೆರವೇರಲಿದೆ ಬೆಂಗಳೂರು, ಗ್ರಾಮಾಂತರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಬಹುದು ಎಂದು ಅವರು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಮದುವೆಯಾಗುಲು ಇಚ್ಚಿಸುವ ವಧು-ವರರು, ತಂದೆ-ತಾಯಿ ಇಲ್ಲವೇ ಪೋಷಕರು ತಮ್ಮ ಹೆಸರುಗಳನ್ನು 22\02\2024 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ. ನಮ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ-ಪತಿ ಗಳಾಗುವ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗುರ, ಪೇಟಮತ್ತು ವಧು-ವರರ ಬಂಧು ಬಳಗದವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಹೆಚ್ಚಿನ 080-26712988, 7019073889 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ , ಆರ್. ನಾರಾಯಣಸ್ವಾಮಿ, ಹೆಚ್.ಕೆ.ಮುತ್ತಪ್ಪ, ದಾಮೋದರ ನಾಯ್ಡು ಸಿ. ಮುತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು.

Related