ಮಂಗ್ಳೂರು ಮೇಯರ್ ಗೆ ಮೂಹರ್ತ ಫಿಕ್ಸ್

ಮಂಗ್ಳೂರು ಮೇಯರ್ ಗೆ ಮೂಹರ್ತ ಫಿಕ್ಸ್

ಮಂಗಳೂರು,ಫೆ.12 : ಕೊನೆಗೂ ಮೇಯರ್ ಚುನಾವಣೆಗೆ ಸರ್ಕಾರ ದಿನ ನಿಗದಿ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬರೋಬ್ಬರಿ 3 ತಿಂಗಳು ಬೇಕಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ಚುನಾವಣೆ ನಡೆದಿದ್ದ ಮಂಗಳೂರು ಮಹಾ ನಗರ ಪಾಲಿಕೆಯ ಒಟ್ಟು 60 ಸದಸ್ಯ ಬಲದಲ್ಲಿ ಬರೋಬ್ಬರಿ 44 ಸ್ಥಾನ ಪಡೆದ ಬಿಜೆಪಿ ಅಂದೇ ಪಾಲಿಕೆಯ ಗದ್ದುಗೆ ಹಿಡಿಯಬಹುದಿತ್ತು. ಆದರೆ ಮೀಸಲು ನಿಗದಿ ವಿಚಾರದಲ್ಲಿ ಬಿಜೆಪಿ ಒಳಗೆ ತಕರಾರು ಇದ್ದ ಹಿನ್ನೆಲೆ ಮೀಸಲಾತಿ ಬದಲಾವಣೆಗೆ ಕೆಲವು ಸದಸ್ಯರು ಪ್ರಯತ್ನಿಸಿದ್ದರು. ಇದೀಗ ಈ ಹಿಂದೆ ನಿಗದಿಯಾದಂತೆ 21ನೇ ಅವಧಿಯ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ.

Related