ಮೈದುಂಬಿ ಹರಿಯುತ್ತಿರುವ ಗಗನಚುಕ್ಕಿ

ಮೈದುಂಬಿ ಹರಿಯುತ್ತಿರುವ ಗಗನಚುಕ್ಕಿ

ಮಳವಳ್ಳಿ: ವಿಶ್ವ ವಿಖ್ಯಾತ ನಯಾಗರ ಫಾಲ್ಸ್ ನೆನಪಿಸುವ ತಾಲ್ಲೂಕಿನ ಪ್ರಸಿದ್ಧ ಶಿವನಸಮುದ್ರದ (ಬ್ಲಫ್) ಗಗನಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಮಾಣದ ನೀರು ನದಿಗೆ ಬಿಟ್ಟಿರುವುದು. ಕೊಡಗೂ, ಕಾವೇರಿ ಕಣಿವೆ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಿದ್ದು ಇದರಿಂದ 30ಸಾವಿರ ಕ್ಯೂಸೆಕ್ ನೀರುನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಶಿವನಸಮುದ್ರಕ್ಕೆ ಹೆಚ್ಚು ನೀರು ಬರುತ್ತಿದೆ.

ಕಬಿನಿ ಮತ್ತು ಕಾವೇರಿ ಜಲಾನಯ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಕಬಿನಿ ಜಲಾಶಯ ಭರ್ತಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ಸಾವಿರರೂ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸಾಕಷ್ಟು ಬೀಳುತ್ತಿರುವುದರಿಂದ ಕೆಆರ್ಎಸ್ಗೆ ಪ್ರಮಾಣದ ನೀರು ಬರುತ್ತಿರುವುದರಿಂದ 30 ಸಾವಿರ ಕ್ಯೂಸೆಕ್ ನೀರು ನದಿಗೆ ಬಂದು ಸೇರುತ್ತಿರುವ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತ ವನಸಿರಿಯೊಂದಿಗಿನ ಪ್ರಕೃತಿಯ ರಮ್ಯ ಸೊಬಗು ಆಕರ್ಷಿಸುತ್ತಿದೆ.

Related