ಲವ್ ಮಾಕ್ಟೇಲ್-2 ಫಸ್ಟ್ ಲುಕ್ ರಿಲೀಸ್

  • In Cinema
  • August 17, 2020
  • 442 Views
ಲವ್ ಮಾಕ್ಟೇಲ್-2 ಫಸ್ಟ್ ಲುಕ್ ರಿಲೀಸ್

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯಿಸಿದ್ದ ಲವ್ ಮಾಕ್ಟೇಲ್ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದು ಎಲ್ಲರ ಮೆಚ್ಚುಗೆ ಗಳಿಸಿತ್ತು.

ಇದೀಗ ಲವ್ ಮಾಕ್ಟೇಲ್-2 ಸಿನಿಮಾದ ತಯಾರಿಯಲ್ಲಿರುವ ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ಫಸ್ಟ್‍ಲುಕ್ ಬಿಡುಗಡೆ ಮಾಡಿದ್ದಾರೆ.

ಈ ಫಸ್ಟ್ ಲುಕ್ನಲ್ಲಿ ಹಳದಿ ಟೀ ಶರ್ಟ್ ತೊಟ್ಟು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ಟ್ವೀಟ್ ಮಾಡಿದ್ದಾರೆ. ಆದರೆ ಅವರದ್ದು ಯಾವ ಪಾತ್ರ, ಪಾತ್ರದ ವಿಶೇಷತೆ ಏನು? ಸಿನಿಮಾದಲ್ಲಿ ಯಾರೆಲ್ಲ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಮಾತ್ರ ಬಹಿರಂಗವಾಗಿಲ್ಲ.

ಈಗಾಗಲೇ ಸ್ಕ್ರಿಪ್ಟ್ ಮುಕ್ತಾಯವಾಗಿದ್ದು, ಶ್ರಟಿಂಗ್ ಪ್ರಾರಂಭವಾಗಬೇಕಿದೆ. ಕೊರೋನಾ ಹಾವಳಿ ಕಡಿಮೆಯಾದ ಬಳಿಕ ಸಿನಿಮಾ ಶೂ ಟಿಂಗ್ ಪ್ಲ್ಯಾನ್ ಮಾಡಿದೆ ಚಿತ್ರತಂಡ.

Related