ಮೇ 3 ರ ವರೆಗೂ ಲಾಕ್ ಡೌನ್ ಫಿಕ್ಸ್

ಮೇ 3 ರ ವರೆಗೂ ಲಾಕ್ ಡೌನ್ ಫಿಕ್ಸ್

ಬೆಂಗಳೂರು , ಏ. 21 : ಲಾಕ್ಡೌನ್ನಲ್ಲಿ ನಿಯಮಗಳನ್ನು ಒಂದಷ್ಟು ಸಡಿಲಗೊಳಿಸಲು ಮುಂದಾಗಿದ್ದ ರಾಜ್ಯ ಸರಕಾರ ಈಗ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ. ಈ ಹಿಂದಿನಂತೆಯೇ ಮೇ 3ರ ವರೆಗೆ ಕಠಿನ ಲಾಕ್ಡೌನ್ ಮುಂದುವರೆಸಲು ನಿರ್ಧರಿಸಿದೆ.
ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯ್ತು. ಸಭೆಯಲ್ಲಿ ಬಹುತೇಕ ಸಚಿವರು ಲಾಕ್ ಡೌನ್ ಸಡಿಲಿಕೆ ಬೇಡ ಎಂದು ಒತ್ತಾಯಿಸಿದ್ದಾರೆ. ಕೋರೋನ ಪ್ರಕರಣ ರಾಜ್ಯದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಈಗಲೇ ಲಾಕ್ ಡೌನ್ ಸಡಿಲಿಸೋದು ಬೇಡ ಅಂತ ಮನವಿ ಮಾಡಿದ್ದಾರೆ.
ಇನ್ನು ಸಭೆಯಲ್ಲಿ ಪಾದರಾಯನಪುರದಲ್ಲಿ ಆರೋಗ್ಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಮೇಲೆ ನಡೆದ ದಾಳಿಯೂ ಚರ್ಚೆಗೆ ಬಂತು. ಈ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ವಸತಿ ಸಚಿವ ಸೋಮಣ್ಣ ನಡುವೆ ಟಾಕ್ ವಾರ್ ಶುರುವಾಗಿದೆ. ಪಾದರಾಯನಪುರದಲ್ಲಿ ಕಳೆದ ೩೦ ವರ್ಷಗಳಿಂದ ನಾನು ರಾಜಕಾರಣ ಮಾಡ್ತಿದ್ದೇನೆ.

Related