ಮುಹೂರ್ತಕೊಟ್ಟ ಶಾಸ್ತ್ರಿಗೆ ಜೀವ ಬೆದರಿಕೆ

ಮುಹೂರ್ತಕೊಟ್ಟ ಶಾಸ್ತ್ರಿಗೆ ಜೀವ ಬೆದರಿಕೆ

ಬೆಳಗಾವಿ : ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತಕೊಟ್ಟ ವಿದ್ವಾಂಸರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ದೇಶದ ವಿವಿಧೆಡೆಯಿಂದ ಸ್ವಾಮೀಜಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬರುತ್ತಿದೆ. ಯಾಕೆ ಮುಹೂರ್ತಕೊಟ್ಟಿದ್ದೀರಿ, ಆ ಮುಹೂರ್ತವನ್ನು ವಾಪಸ್ಸು ಪಡೆದುಕೊಳ್ಳಿ ಅಂತಾ ಅನಾಮಿಕರು ಕರೆ ಮಾಡುತ್ತಿದ್ದಾರೆ.

ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನೀಡಿದ್ದ ಬೆಳಗಾವಿಯ ಎನ್.ಆರ್.ವಿಜಯೇಂದ್ರ ಶರ್ಮಾ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ.

ಎನ್. ಆರ್.ವಿಜಯೇಂದ್ರ ಶರ್ಮಾ, ಬೆಳಗಾವಿಯ ಶಾಸ್ತ್ರೀ ನಗರದಲ್ಲಿರುವ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿಗಳಾಗಿದ್ದಾರೆ. ಟಿಳಕವಾಡಿ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿರುವ ವಿದ್ವಾಂಸರ ವಿದ್ವಾಂಸರ ಮನೆ ಮುಂದೆ ಓರ್ವ ಪೊಲೀಸ್ ಪೇದೆ ನೇಮಕ ಮಾಡಲಾಗಿದೆ.

Related