ಪಕ್ಷಾತೀತವಾಗಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸೋಣ: ಡಿಸಿಎಂ

ಪಕ್ಷಾತೀತವಾಗಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸೋಣ: ಡಿಸಿಎಂ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ ಎಲೆಕ್ಷನ್ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಇಂದು ಸಭೆ ಕರೆದಿದ್ದರು. ಬೆಂಗಳೂರು ನಗರ ಸಂಸದರು, ಶಾಸಕರ ಸಭೆ ಕರೆದಿದ್ದು ಚರ್ಚೆ ಮಾಡಿದ್ದಾರೆ. ಈ ಸಭಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಭಾಗವಹಿಸಿದ್ದರು.

ವಿಧಾನಸೌಧದಲ್ಲಿಂದು ನಡೆದ ಈ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ವಿಧಾನಸಭಾ ಸದಸ್ಯರುಗಳ ಹಾಗೂ ವಿಧಾನಪರಿಷತ್ ಸದಸ್ಯರುಗಳು, ಸಂಸದರುಗಳು ಭಾಗಿಯಾಗಿದ್ದರು. ಸಭೆಯ ಆರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿ ಸಚಿವರಾಗಿ ಸಮಗ್ರ ಬೆಂಗಳೂರಿನ ಅಭಿವೃದ್ಧಿಗೆ ಒತ್ತು ನೀಡುವ ತೀರ್ಮಾನ ಮಾಡಿದ್ದೇನೆ. ಹಾಗೆಯೇ ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಗಮನಹರಿಸುವ ಬಹು ಮುಖ್ಯವಾಗಿದೆ.

ಈ ಬಗ್ಗೆ ಸಲಹೆ ಪಡೆಯಲು ಎಲ್ಲ ಶಾಸಕರನ್ನು ಸಭೆಗೆ ಕರೆದಿದ್ದೇನೆ. ಬೆಂಗಳೂರಿನ ಸಮಗ್ರ ಅಭಿವದ್ಧಿಗೆ ಸಂಬಂಧಿದಂತೆ ಎಲ್ಲರೂ ಸಲಹೆ ನೀಡಿ, ಪಕ್ಷಾತೀತವಾಗಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.

ಮಳೆ ಬಂದಾಗ ಬೆಂಗಳೂರಿನಲ್ಲಿ ಸಮಸ್ಯೆಗಳು, ಅನಾಹುತಗಳಾಗಿದ್ದು, ಇದನ್ನು ತಡೆಯಲು ಏನು ಮಾಡಬೇಕು ಎಂಬದರ ಸಲಹೆ ನೀಡುವಂತೆ ಅವರು ಸಭೆಯಲ್ಲಿದ್ದ ಶಾಸಕರನ್ನು ಕೋರಿದರು. ಇದಾದ ನಂತರ ಎಲ್ಲ ಶಾಸಕರುಗಳು ಬೆಂಗಳೂರಿನ ಅಭಿವೃದ್ಧಿ ಹಾಗೂ ಮಳೆ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮದೆ ಆದ ಸಲಹೆಗಳನ್ನು ಸಭೆಯ ಮುಂದಿಟ್ಟರು.

ಈ ಸಭೆಯಲ್ಲಿ ಸಚಿವರುಗಳಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹಮದ್, ಸಂಸದರಾದ ಡಿ.ಕೆ. ಸುರೇಶ್, ತೇಜಸ್ವಿಸೂರ್ಯ, ಪ್ರತಾಪ್‌ಸಿಂಹ್, ಕೆ.ಸಿ. ಚಂದ್ರಶೇಖರ್, ಶಾಸಕರುಗಳಾದ ರಿಜ್ವಾನ್ ಹರ್ಷದ್, ಎ.ಸಿ. ಶ್ರೀನಿವಾಸ್, ಎಂ. ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಶರವಣ, ಗೋಪಾಲಯ್ಯ, ಉದಯ ಗರುಡಾಚಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಜೀರ್ ಅಹಮದ್ ಮತ್ತಿತರರು ಪಾಲ್ಗೊಂಡಿದ್ದರು.

Related