ಶಾಸಕರ ಗ್ರಾಮವಾಸ್ತವ್ಯ ರಾಜಕೀಯ ಡೊಂಬರಾಟ

ಶಾಸಕರ ಗ್ರಾಮವಾಸ್ತವ್ಯ ರಾಜಕೀಯ ಡೊಂಬರಾಟ

ಜೇವರ್ಗಿ, : ತಾಲೂಕಿನ ಶಾಸಕರು ಹಾಗೂ ವಿರೋಧ ಪಕ್ಷದ ಸಚೇತಕರಾದ ಡಾ. ಅಜಯಸಿಂಗ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಇಂದು ನಡೆಯಲಿರುವ ಗ್ರಾಮ ವಾಸ್ತವ್ಯವು ಇದೊಂದು ರಾಜಕೀಯ ಗಿಮಿಕ್ ಆಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಶಾಸಕರು ಗ್ರಾಮವಾಸ್ತವ್ಯ ಮಾಡುತ್ತಿರುವದು ಬಡವರ ಏಳಿಗೆಗಾಗಿ ಅಥವಾ ರಾಜಕೀಯ ಡೊಂಬರಾಟಕ್ಕಾ? ಅನ್ನೊದು ಅರ್ಥವಾಗತಿಲ್ಲ, ಶಾಸಕರು ಜೆರಟಗಿಯಲ್ಲಿ ವಾಸ್ತವ್ಯ ಮಾಡೊದರಲ್ಲಿ ಅರ್ಥವಿಲ್ಲ. ನಿಜವಾದ ಜನಪ್ರತಿನಿಧಿಯಾದವರು ನಿಜವಾದ ಜನನಾಯಕರಾದವರು ಎಲ್ಲಿ ಸಮಸ್ಯೆ ಇರುತ್ತದೆಯೊ ಆ ಗ್ರಾಮಗಳು ಆಯ್ಕೆ ಮಾಡಕೊಳ್ಳಬೇಕು. ಆದರೆ ಸಮಸ್ಯೆಗಳು ಅಥಿ ಕಡಿಮೆ ಇದ್ದ ಗ್ರಾಮ ಆಯ್ಕೆ ಮಾಡಿಕೊಂಡಾಗಲೇ ಸಾರ್ವಜನಿಕರಿಗೆ ಗೊತ್ತಾಯಿತ್ತು ಇದೊಂದು ರಾಜಕೀಯ ಡೊಂಬರಾಟ ಅಂತ, ನಿಮಗೆ ಬಡವರಿಗೆ ದೀನದಲಿತರ ಮೆಲೆ ಕಾಳಜಿ ಇದ್ದರೆ. ಮೊನ್ನೆ ಪ್ರವಾಹ ಬಂದು 38 ಹಳ್ಳಿಗಳಲ್ಲಿ ಮನೆ ಮಠ ಕಳಕೊಂಡ ನೆರೆಸಂತ್ರಸಥರ ಗ್ರಾಮದಲ್ಲಿ ವಾಸ್ತವ್ಯಮಾಡಿ, ಅವರ ಸಮಸ್ಯೆ ಆಲಿಸಿ, ಕೈಲಾದಸ್ಟು ಸಹಕಾರ, ಮಾಡಿದರೆ ತಾವೊಬ್ಬ ಕ್ರಿಯಾಶೀಲ ಶಾಸಕರು ಅಂತಾ ಕ್ಷೆತ್ರದ ಜನರು ಒಪ್ಪಿಕೊತಿದ್ದರು.  ಇದೊಂದು ನಿಮ್ಮ ಡೊಂಬರಾಟದ ಗ್ರಾಮವಾಸ್ತವ್ಯ ಎಂದು ಕರವೇ ಅಧ್ಯಕ್ಷ ಶಿವಲಿಂಗ ಹಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ಶಾಸಕ ಡಾ. ಅಜಯಸಿಂಗ್ ವಿರುದ್ಧ ಆರೋಪಿಸಿದ್ದಾರೆ.

Related