ಕುಡಿಯುವ ನೀರು ಯೋಜನೆಗೆ ಜಮೀನು ಬಿಟ್ಟುಕೊಡಿ

ಕುಡಿಯುವ ನೀರು ಯೋಜನೆಗೆ ಜಮೀನು ಬಿಟ್ಟುಕೊಡಿ

ತುಮಕೂರು : ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಕುಡಿಯುವ ನೀರು ಯೋಜನೆ ನಿರ್ಮಾಣಕ್ಕೆ ರೈತರು ತಮ್ಮ ಜಮೀನು ಬಿಟ್ಟುಕೊಟ್ಟು ಯೋಜನೆಗಳನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಹೇಮಾವತಿ ನಾಲಾ ಇಂಜಿನಿಯರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗಳಾದ ಈ ಎರಡು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಸಬೇಕಾಗಿತ್ತು.

ಆದರೆ ಕೆಲವೊಂದು ಕಡೆ ರೈತರು ಜಮೀನು ಬಿಟ್ಟು ಕೊಡದೆ ಇರುವುದರಿಂದ ಯೋಜನೆ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದರು. ಈ ಯೋಜನೆಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನ್ಯಾಯಸಮತ ಬೆಲೆಯನ್ನು ರೈತರಿಗೆ ನೀಡಲಿದೆ.

ಭೂಮಿಯನ್ನು ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಿ ಎಂದು ಸಭೆಯಲ್ಲಿ ಹಾಜರಿದ್ದ ರೈತರಿಗೆ ಮನವಿ ಮಾಡಿದರು.ಯೋಜನೆ ಹಾದು ಹೋಗುವ ಮಾರ್ಗಮಧ್ಯದಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ರೈತರು ಸಚಿವರಿಗೆ ಕೋರಿದರು.

Related