ಸಾರ್ವಜನಿಕರಿಗೆ ಮಾರ್ಗದರ್ಶಿಯಾದ ಕೆಆರ್ ಪುರಂ ಪ್ರಥಮ ದರ್ಜೆ ಕಾಲೇಜ್

ಸಾರ್ವಜನಿಕರಿಗೆ ಮಾರ್ಗದರ್ಶಿಯಾದ ಕೆಆರ್ ಪುರಂ ಪ್ರಥಮ ದರ್ಜೆ ಕಾಲೇಜ್

ಬೆಂಗಳೂರು: ಪರಿಸರದಲ್ಲಿ ಉಂಟಾಗುತ್ತಿರುವ ಏರುಪೇರುಗಳು ಮತ್ತು ಅವುಗಳ ಪರಿಹಾರಗಳ ಕಡೆಗೆ ಜನರ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ಆಯೋಜಿಸಲಾಗುತ್ತದೆ. ವಿಶ್ವ ಪಲಸರ ದಿನವನ್ನು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂ, ಬೆಂಗಳೂರು, ಪ್ರಾಂಶುಪಾಲರಾದ ಪ್ರೊ ಪ್ರತಿಭಾ ಪಾರ್ಶ್ವನಾಥ್, ಐಕ್ಯೂಎಸಿ ಸಂಚಾಲಕರಾದ ಡಾ. ರೇಣುಕಾ ಆ ಚಾನಲೋ, ಎ ಕ್ಲಬ್ ಸಂಚಾಲಕರಾದ ಡಾ. ಶ್ರೀಶಾ ಹಾಗೂ ಕಾಲೇಜಿನ ಏಏಧ ಸಮಿತಿಗಳ ಸಹಭಾಲತ್ವದಲ್ಲಿ “ಫಲಸರ ಜಾಗೃತಿ ಸಪ್ತಾಹ”ವನ್ನು ಹಮ್ಮಿುಕೊಂಡಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಪ್ರಾಂಶುಪಾಲರಾದ ಪ್ರೊ ಪ್ರತಿಭಾ ಪಾರ್ಶ್ವನಾಥ್ ಅವರು ಮಾತನಾಡಿ, “ಹಸಿರು ಇದ್ದರೆ ಉಸಿರು”, ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಮುಂತಾದ ಅವಶ್ಯಕತೆಗಳನ್ನು ಪರಿಸರ ಸಂರಕ್ಷಣೆಯ ಮೂಲಕ ಪಡೆಯಬಹುದು.

“ಪ್ಲಾಸ್ಟಿಕ್ ನಿರ್ಮೂಲನೆ ನಮ್ಮೆಲ್ಲರ ಹೊಣೆ” ನಾವು ಏರ್ಪಡಿಸಿರುವ ‘ಪರಿಸರ ಜಾಗೃತಿ ಸಪ್ತಾಹ’ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

`ಸಪ್ತಾಹದ ಮೊದಲ ದಿನದಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್‌ ನ ರೋವರ್ ಮತ್ತು ರೇಂಜರ್ ಘಟಕದ ವಿದ್ಯಾರ್ಥಿಗಳು “ಪ್ಲಾಸ್ಟಿಕ್ ನಿರ್ಮೂಲನಾ ಜಾಗೃ ಜಾಥಾವನ್ನು ಕೈಗೊಳ್ಳುವುದರ ಮೂಲಕ ಅಂಗಡಿ ಮುಟ್ಟುಗಳಗೆ ತೆರಳಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಜೀವಿಗಳ ಮೇಲೆ ಆಗುತ್ತಿರುವ ಅಪಾಯಗಳ ಬಗೆಗೆ ಮನವರಿಕೆ ಮಾಡಿದರಲ್ಲದೆ ಸೂಕ್ತ ಅಡಿಯಲ್ಲಿ ಕಸವನ್ನು ವಿಂಗಡಿಸುವುದರ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹು ಎಂದು ಮನವರಿಕೆ ಮಾಡಿದರು. ಸಪ್ತಾಹದ ಎರಡನೆ ದಿನದಂದು ಕಾಲೇಜಿ ಅರ್ಥಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಗೆ “ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ” ವಿಷಯ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಹಾಗೂ “ಗ್ರೀನ್  ಗ್ರೋಥ್‌ ಎಕೊ ಟ್ಯಾಕ್ಸಸ್‌  ಇನ್ ಇಂಡಿಯಾ ಸಸ್ಟೈನೆಬಲ್ ಡೆವಲಪ್‌ಮೆಂಟ್” ಏಷಯದ ಬಗೆಗೆ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳಲ್ಲಿಯೂ ಪರಿಸರ ಸಂರಕ್ಷಣೆಯ ಮಹತ್ವದ ಬಗೆಗೆ ಪ್ರೇರೇಪಿಸುವ ಕಾರಕಮ ಇದಾಗಿತ್ತು.

ಸಪ್ತಾದ ಮೂರನೆಯ ದಿನದಂದು ರೆಡ್ ಕ್ರಾಸ್ ಮತ್ತು ಆಂಟಿ ರ್ಯಗಿಂಗ್ ಘಟಪದದವರ  ಸಹಭಾರತದಲ್ಲಿ ತಂಬಾಕು ರಹಿತ ದಿನ’ದ ಪ್ರಯುಕ್ತ ಜಾಥಾವನ್ನು ಹಮ್ಮಿಕೊಂಡಿದ್ದರು. ಈ ಮೂಲಕ ತಂಬಾಕು ಸೇವನೆ, ಮನುಷ್ಯನ ದೇಹಕ್ಕೆ ಅಲ್ಲದೆ ಪರಿಸರದ ಮೇಲೂ ದುಷ್ಪಣಾಮಗಳನ್ನು ಉಂಟುಮಾಡುತ್ತಿರುವುದರ ಬಗ್ಗೆ ಹಾಗೂ “ನಮಗೆ ಆರೋಗ್ಯ ಬೇಕು ತಂಬಾಕು ಅಲ್ಲ” ಎಂಬ ಘೋಷ ಮೂಲಕ ಜಗರಲ್ಲಿ ಜಾಗೃತಿ ಮೂಡಿಸಿದರು.

ಸಪ್ತಾಹದ ನಾಲ್ಕನೆಯ ದಿನದಂದು ಕಾಲೇಜಿನ ಎನ್. ಎಸ್‌.ಎಸ್‌. ಘಟಕದ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ಮತ್ತು ಕಸದ ವಿಂಗಡಣೆಯ ಮಹತ್ವವನ್ನು ತಿಳಿಸುವುದರ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ನೀಡಿದರು. ಸಪ್ತಾಹದ ಐದನೆಯ ದಿನದಂದು “Save Electricity save Earth” ಕಾರ್ಯಕ್ರಮವನ್ನು ಆಯೋಜಿಸಿದ್ದು, ಒಂದು ಗಂಟೆಯ ಕಾಲ ವಿದ್ಯುತ್ತನ್ನು ಕಡಿತಗೊಳಿಸಿ ಸೌರಶಕ್ತಿಯ ಪ್ರಯೋಜನವನ್ನು ಪಡೆದ ಈ ಕಾರಕ್ರಮ ಬಹಳ ಅರ್ಥಪೂರ್ಣವಾಗಿ ಮೂಡಿಬಂತು. ಸಪ್ತಾಹದ ಕೊನೆಯ ದಿನ ಅಂದರೆ ಜೂನ್ 10, 20123 ರಂದು “ಕಾರ್ಬನ್ ರಹಿತ ವಾಹನ ಚಾಲನೆ ದಿನವನ್ನಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಕೃತಿಗೆ ಹಾನಿಯುಂಟು ಮಾಡುವ ವಾಹನಗಳ ಬಳಕೆ ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಪ್ರತಿಭಾ ಪಾರ್ಶ್ವನಾಥ್‌ ಕಾರ್ಬನ್‌ ರಹಿತ ವಾಹನದಲ್ಲಿ ಹಾಜರಾದುದು ವಿದ್ಯಾರ್ಥಿಗಳಗೆ ಮಾದರಿಯಾಯಿತು ಹಾಗೂ ಕಾಲೇಜಿನ ಅನೇಕ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಕಾಲುನಡಿಗೆಯಲ್ಲಿಯೇ ಕಾಲೇಜಿಗೆ ಹಾಜರಾಗಿರುವುದು ಸಪ್ತಾಹದ ಯಶಸ್ವಿಗೆ ಕಾರಣವಾಗಿರುತ್ತದೆ.

Related