ಕೊಳ್ಳುರ್ ಎಂ ಸೇತುವೆ ಮುಳುಗಡೆ

ಕೊಳ್ಳುರ್ ಎಂ ಸೇತುವೆ ಮುಳುಗಡೆ

ಶಹಾಪುರ : ನಾರಾಯಣ ಪುರ ಜಲಾಶಯ ತುಂಬಿ ಹೆಚ್ಚುವರಿ ನೀರು ಕೃಷ್ಣಾ. ಭೀಮಾ ನದಿಗೆ ಹರಿ ಬಿಡಲಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಕೊಳ್ಳುರ್ ಎಂ ಹತ್ತಿರದ ಸೇತುವೆ ಅಪಾಯದ ಮಟ್ಟ ತಲುಪಿ ಸೇತುವೆ ತುಂಬೆಲ್ಲ ನೀರು ತುಂಬಿ ಜಲಾಶಯದಂದೆ ಹರಿಯುತ್ತಿದ್ದು ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಜಗನಾಥರೆಡ್ಡಿ ತಿಳಿಸಿದರು.

ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡಲಾಗುತ್ತಿದ್ದು ನದಿ ಪಾತ್ರಗಳ ಗ್ರಾಮಗಳಾದ ಕೊಳ್ಳುರ್ ಎಂ. ಗೌಡುರ್. ಟೊಣ್ಣೂರ್. ಯಕ್ಷಿಂತಿ. ಜನತೆ ನದಿ ತೀರಕ್ಕೆ ತೆರಳುವುದು. ಜಾನುವಾರುಗಳನ್ನು ಬಿಡುವುದಾಗಲಿ. ಪಂಪ್ ಸೆಟ್‌ಗಳನ್ನು ಕಿತ್ತೂಕಂಡು ಬರುವ ಸಾಹಸ ಮಾಡಬಾರದೆಂದು ಗ್ರಾಮಗಳಲ್ಲಿ ಈಗಾಗಲೇ ಡಂಗುರಸರಲಾಗಿದೆ. ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ತೆರವುಗೊಳಿಸಲು ಜೇಸ್ಕಾಂ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಪರಿಣಾಮ ಕೃಷ್ಣಾ ನದಿಗೆ 2 ಲಕ್ಷ 50 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಇದೀಗ ಯಾದಗಿರಿ ಜಿಲ್ಲೆಯ 40 ಗ್ರಾಮಗಳು ಪ್ರವಾಹ ಭೀತಿಯನ್ನ ಎದುರಿಸುತ್ತಿವೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ರಸ್ತೆಯಲ್ಲಿರುವ ಕೋಳೂರು ಸೇತುವೆ ಕೂಡ ಮುಳುಗಡೆಗೊಂಡಿದ್ದು ಈ ಭಾಗದಲ್ಲಿ ಕೃಷ್ಣ ನದಿ ತುಂಬು ಹರಿಯುತ್ತಿದೆ.

Related